Site icon PowerTV

ಒಬ್ರನ್ನು ಜೈಲಿಗೆ, ಇನ್ನೊಬ್ಬರನ್ನು ಕಾಡಿಗೆ ಕಳುಹಿಸುತ್ತೇನೆ : ಬಸನಗೌಡ ಪಾಟೀಲ್​

ಗದಗ: ನಾನು ಅಪ್ಪಿ-ತಪ್ಪಿ ಮುಖ್ಯಮಂತ್ರಿ ಆದ್ರೆ, ಒಬ್ರನ್ನು ಜೈಲಿಗೆ, ಇನ್ನೊಬ್ಬರನ್ನು ಕಾಡಿಗೆ ಕಳುಹಿಸುತ್ತೇನೆ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಮಹಾಗಣಪತಿ ಧರ್ಮಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯವೈಖರಿಯನ್ನು ಟೀಕಿಸಿದರು. ಇದೇ ವೇಳೆ ತಾವು ಸಿಎಂ ಆದ್ರೆ, ಬದಲಾವಣೆ ಆಗುತ್ತದೆ ಎನ್ನುವ ಮೂಲಕ ಸಿಎಂ ಆಗುವ ಆಸೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದರು.‌ ಉತ್ತರ ಪ್ರದೇಶ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗಿಸಿ ಅಂದ್ರೆ ಸಿಎಂ ನಮ್ಮಲ್ಲಿ ಸಾಧ್ಯವಿಲ್ಲ ಎನ್ನುತ್ತಾರೆ.

ಇನ್ನು, ಸಾಧ್ಯವಿಲ್ಲ ಅಂದ್ರೆ ಯಾತಕ್ಕಿದ್ದೀರಿ? ಮನೆಗೆ ಹೋಗ್ರಿ ಎಂದರು. ಹಾಡಹಗಲೇ ಹಿಂದೂಗಳನ್ನು ಹೊಡೀತಾರೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್​ಗೆ ಬೆಂಕಿ ಹಚ್ಚಿದ್ರು. ಪೊಲೀಸರ ಕೈಯಲ್ಲಿ ಬಂದೂಕು ಕೊಟ್ಟಿದ್ದೀರಿ. ಆದ್ರೆ, ಹೊಡೀಬೇಡಿ ಎಂದಿದ್ದೀರಿ. ನಾನು ಮುಖ್ಯಮಂತ್ರಿ ಆಗಿದ್ರೆ, ಮೊದಲು ಹೊಡೀರಿ ಅಂತಿದ್ದೆ. ಹೊಡೆದವರಿಗೆ ಪ್ರಮೋಷನ್ ಕೊಡ್ತಿದ್ದೆ. ಪಿಸಿ ಇದ್ದವನನ್ನು ಎಎಸ್​ಐ, ಪಿಎಸ್​ಐ ಆಗಿದ್ದವನನ್ನು ಸಿಪಿಐ ಮಾಡುತ್ತಿದ್ದೆ. ಅಲ್ಲದೇ ಕರ್ನಾಟಕದ ತುಂಬಾ ಎನ್​​ಕೌಂಟರ್​​ ಸ್ಪೆಷಲಿಸ್ಟ್​​ಗಳನ್ನು ಇಡುತ್ತಿದ್ದೆ ಎಂದು ಪರೋಕ್ಷವಾಗಿ ಯತ್ನಾಳ್ ​ಗುಡುಗಿದರು. ನಾನು ಅಪ್ಪಿ-ತಪ್ಪಿ ಮುಖ್ಯಮಂತ್ರಿ ಆದ್ರೆ, ಒಬ್ರನ್ನು ಜೈಲಿಗೆ, ಇನ್ನೊಬ್ಬರನ್ನು ಕಾಡಿಗೆ ಕಳುಹಿಸುತ್ತೇನೆ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

Exit mobile version