Site icon PowerTV

ಕಾಂಗ್ರೆಸ್ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರಲ್ಲ; ಯಡಿಯೂರಪ್ಪ ಅಭಿಪ್ರಾಯ

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಏನ್ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಪರ ಇದ್ದಾರೆ. ಕಾಂಗ್ರೆಸ್ ನವರು ಏನ್ ತಿಪ್ಪರಲಾಗ ಹಾಕಿದ್ರೂ ಕೂಡ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ.

ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ ಜೊಡೋ, ರಥಯಾತ್ರೆ ಮಾಡುತ್ತಿದ್ದಾರೆ. ಏನ್ ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ನಾನು ಸೆಪ್ಟೆಂಬರ್​ 22 ರಿಂದ ರಾಜ್ಯ ಪ್ರವಾಸ ಮಾಡ್ತೀನಿ. ಇಂದು ಬೈಲಹೊಂಗಲದಲ್ಲಿ ಕಾರ್ಯಕ್ರಮ ಇದೆ. ಮುಗಿಸಿ ಬೆಂಗಳೂರಿಗೆ ಹೋಗ್ತೀನಿ ಎಂದರು.

ಬಳ್ಳಾರಿ  ವಿಮ್ಸ್ ನಲ್ಲಿ ಸಾವು ಪ್ರಕರಣವಾಗಿ ಪ್ರತಿಕ್ರಿಯಿಸಿ, ತನಿಖೆ ನಡೀತಿದೆ ನೋಡೋಣ, ವಿಮ್ಸ್ ಸಾವು ಸರ್ಕಾರಕ್ಕೆ ಡ್ಯಾಮೇಜ್ ಆಗಿಲ್ವಾ ಅನ್ನೋ ಪ್ರಶ್ನೆಗೆ ಸುಮ್ಮನಾದರು.

Exit mobile version