Site icon PowerTV

ಮಕ್ಕಳ ಕಳ್ಳರೆಂದು ಕಾರಿನ ಬೆನ್ನಟ್ಟಿದ ಗ್ರಾಮಸ್ಥರು; ವಾಹನ ಪಲ್ಟಿ..!

ಬಾಗಲಕೋಟೆ: ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಇನ್ನೋವಾ ವಾಹನ ಬೆನ್ನಟ್ಟಿದ ಘಟನೆ ಜಿಲ್ಲೆಯ ಸಾಳಗುಂದಿ ಗ್ರಾಮದ ಬಳಿ ನಡೆದಿದೆ.

ಸಾಳಗುಂದಿ ಗ್ರಾಮಸ್ಥರು ಹಾಗೂ ಬೀಳಗಿ ಕಡೆಯಿಂದ ಬೆನ್ನಟ್ಟಿ ಬಂದಿದ್ದ ಅಕ್ಕಪಕ್ಕದ ಗ್ರಾಮಸ್ಥರು ಇನ್ನೋವಾ ಕಾರಿನಲ್ಲಿ ಮಕ್ಕಳು ಕಳ್ಳರು ಬಂದಿದ್ದಾರೆ ಎಂದು ಬೆನ್ನಟ್ಟಿದ್ದಾರೆ. ಆಗ ಗ್ರಾಮಸ್ಥರಿಂದ ಪಾರಾಗಲು ಹೋಗಿ ವಾಹನ ಪಲ್ಟಿಯಾಗಿದೆ. ಜಿಲ್ಲೆಯಲ್ಲಿ ಹೊರ ರಾಜ್ಯದವರು ಮಕ್ಕಳ ಕಳ್ಳರು ಬಂದಿದ್ದಾರೆಂದು ನಂಬಿ ಗ್ರಾಮಸ್ಥರಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

ವಾಹನ ಪಲ್ಟಿಯಾದ ಹಿನ್ನೆಲೆ ಹರಿದ್ವಾರದ ದೇವರಾಜ್, ಔರಂಗಬಾದ್ ನ ಇಲಿಯಾಸ್, ಬಾರಾಮತಿಯ ಜಗದೀಪ ಗಂಭೀರ ಗಾಯಗೊಂಡಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆ ಗ್ರಾಮೀಣ ಠಾಣೆ ಪೋಲಿಸರು ಗಾಯಗೊಂಡವರ ವಿಚಾರಣೆ ನಡೆಸಿದ್ದಾರೆ. ಗಾಯಗೊಂಡವರು ಮಕ್ಕಳ ಕಳ್ಳರು ಅಲ್ಲವೆಂದು ಪೊಲೀಸರು ಮೂಲಗಳು ತಿಳಿಸಿವೆ.

Exit mobile version