Site icon PowerTV

ಮಲೆನಾಡು ಭಾಗದಲ್ಲಿ ಮುಂದುವರೆದ ಕಾಡಾನೆ ಹಾವಳಿ

ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಜಾಸ್ತಿಯಾಗಿದ್ದು, ಸಕಲೇಶಪುರ ಹಳೆಕೆರೆ ಗ್ರಾಮದ ಸಮೀಪ ಕಾಡಾನೆಗಳು ಪ್ರತ್ಯಕ್ಷವಾಗಿದೆ.

ನಗರದಲ್ಲಿ ಹಿಂಡು‌ಹಿಂಡಾಗಿ ಕಾಫಿತೋಟಗಳಲ್ಲಿ ಓಡಾಡುತ್ತಿರುವ ಕಾಡಾನೆಗಳು, ಗುಂಪು ಗುಂಪಾಗಿ 40 ಕ್ಕೂ ಹೆಚ್ಚು ಕಾಡಾನೆಗಳು ಓಡಾಡುತ್ತಿದೆ. ಹಳೆಕೆರೆ ಗ್ರಾಮದ ಗೀತಾಂಜಲಿ ಕಾಫಿ ಎಸ್ಟೇಟ್​​​ನಲ್ಲಿಕ ಕಾಡಾನೆಗಳ ಹಿಂಡು ಕಂಡು ಜನರು ಆತಂಕಗೊಂಡಗೊಂಡಿದ್ದಾರೆ.

ಇನ್ನು, ಕಾಡಾನೆಗಳ‌ ಹಿಂಡು ಹಿಂಡಾಗಿ ಹೋಗೋ‌ ದೃಶ್ಯ ಸ್ಥಳಿಯರ ಮೊಬೈಲ್‌ನಲ್ಲಿ‌ ಸೆರೆಯಾಗಿದ್ದು, ಕಾಡಾನೆಗಳ ಜೊತೆಯಲ್ಲಿ ಪುಟ್ಟ ಮರಿ ಆನೆಗಳು ಸಾಗಿದೆ. ಹಿಂಡು ಕಾಡಾನೆಗಳನ್ನ ಕಂಡು ಬೆಚ್ಚಿಬಿದ್ದಿರೋ ಜನ ಕಾಫಿತೋಟದಲ್ಲಿ ಕೆಲಸಕ್ಕೆ ಹೋಗಲು ಹೆದರುತ್ತಿರುವ ಕಾರ್ಮಿಕರು, ನಿತ್ಯವೂ ಒಂದಿಲ್ಲೊಂದು ಭಾಗದಲ್ಲಿ‌ ಕಾಡಾನೆಗಳು ಕಾಣಿಸಿಕೊಳ್ಳುತ್ತಿದೆ.

Exit mobile version