Site icon PowerTV

ಕೊತ್ವಾಲ್ ರಾಮಚಂದ್ರ ಶಿಷ್ಯರ ಕಾರಣಕ್ಕೆ ಸಿದ್ದರಾಮಯ್ಯಗೆ ಹೆಚ್ಚಿನ ಭದ್ರತೆ.!

ಚಿಕ್ಕಮಗಳೂರು: ಕೊತ್ವಾಲ್ ರಾಮಚಂದ್ರರ ಶಿಷ್ಯರೂ ರಾಜಕಾರಣದಲ್ಲಿ ಇದ್ದಾರೆ. ಅವರಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರಿಗೆ ಭದ್ರತೆ ನೀಡಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ ಹೇಳಿದ್ದಾರೆ.

ನನಗೆ ಯಾವುದೇ ಬೆದರಿಕೆ ಇಲ್ಲ. ಭದ್ರತೆ ಏಕೆ ಹೆಚ್ಚಿಸಿದ್ದಾರೋ ಗೊತ್ತಿಲ್ಲ ವಿಚಾರಕ್ಕೆ ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಟಿ ರವಿ ಅವರು, ಸಿದ್ದರಾಮಯ್ಯ ಅವರಿಗೆ ಯಾವುದೇ ಬೆದರಿಕೆ ಇಲ್ಲದೆ ಇರಬಹುದು. ಆದರೆ, ರಾಜಕಾರಣದಲ್ಲಿ ಕೊತ್ವಾಲ್ ರಾಮಚಂದ್ರರ ಶಿಷ್ಯರೂ ಇರೋ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಭದ್ರತೆ ನೀಡಿದ್ದೇವೆ ಎಂದು ಸಿಟಿ ರವಿ ತಿಳಿಸಿದರು.

ನನಗೆ ಭದ್ರತೆ ಹೆಚ್ಚಿಸಿರುವುದು ನನಗೆ ಗೊತ್ತಿಲ್ಲ. ರಾಜ್ಯ ಸರ್ಕಾರದವರು ಮಾಡಿದ್ದಾರೆ, ಯಾಕ್ ಮಾಡಿದ್ದಾರೆ ಗೊತ್ತಿಲ್ಲ. ನನಗೆ ಬೆದರಿಕೆ ಇತ್ತು ಅಂತಾ ಯಾರೋ ಹೇಳಿದ್ದಾರೆ. ನಾನು ಈ ಬಗ್ಗೆ ಏನು ಹೇಳಿಲ್ಲ, ನನಗೆ ಏನು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಇಂದು ಮಂಡ್ಯದಲ್ಲಿ ಹೇಳಿಕೆ ನೀಡಿದ್ದರು.

Exit mobile version