Site icon PowerTV

ಇತಿಹಾಸ ಬರೆಯೋ ಕಿಚ್ಚು.. ನುಗ್ಗಿ ನಡೆ ಮುಂದೆ ಎಂದ ಮಾಸ್ಟರ್

ಏನಾದ್ರು ಸಾಧಿಸೋಕೆ ಗುರಿ ಒಂದಿದ್ರೆ ಸಾಲದು, ಅದನ್ನ ಈಡೇರಿಸೋಕೆ ಗುರುವಿನ ಅವಶ್ಯಕತೆಯೂ ಇದೆ. ಸದ್ಯ ಸ್ಯಾಂಡಲ್​ವುಡ್ ಅಂಗಳದಲ್ಲಿ ಹೊಸ ಶಿಷ್ಯರ ಬಳಗ ಕಟ್ಟಿ, ಅವ್ರನ್ನ ಟ್ರೈನ್ ಮಾಡಿ ಅಖಾಡಕ್ಕೆ ಇಳಿಸಲಿದ್ದಾರೆ ಅಧ್ಯಕ್ಷ ಶರಣ್. ನುಗ್ಗಿ ನಡೆ ಮುಂದೆ ಅಂತ ಇತಿಹಾಸ ಬರೆಯೋ ಕಿಚ್ಚಲ್ಲಿ ಆಟ ಶುರು ಮಾಡ್ತಿದ್ದಾರೆ. ಅದ್ಹೇಗೆ ಅನ್ನೋದನ್ನ ನೀವೇ ಓದಿ.

ಯಾವುದೇ ಒಬ್ಬ ವ್ಯಕ್ತಿಗೆ ಆತನಲ್ಲಿರೋ ಸಾಮರ್ಥ್ಯ ಹೊರಬರೋಕೆ ಒಂದೊಳ್ಳೆ ವೇದಿಕೆಯ ಅಗತ್ಯವಿರುತ್ತೆ. ಅಲ್ಲದೆ, ಆ ಪ್ರತಿಭೆಯನ್ನ ಗುರ್ತಿಸಿ, ಹುರಿದುಂಬಿಸಿ, ಬಡಿದೆಬ್ಬಿಸೋ ಮಾರ್ಗದರ್ಶಕನ ಅಗತ್ಯವೂ ಇದೆ. ಅದ್ರಲ್ಲೂ ವಿದ್ಯಾರ್ಥಿಗಳಿಗೆ ಗುರುವಿಲ್ಲದೆ ಗುರಿ ಮುಟ್ಟಲು ಸಾಧ್ಯವೇ ಇಲ್ಲ. ಇದೀಗ ನಾವು ಹೇಳೋಕೆ ಹೊರಟಿರೋದು ಕೂಡ ಅಂಥದ್ದೇ ಗುರುಶಿಷ್ಯರ ಬಗ್ಗೆ.

ಇತಿಹಾಸ ಬರೆಯೋ ಕಿಚ್ಚಿನಿಂದ ನುಗ್ಗಿ ನಡೆ ಮುಂದೆ ಅಂತ ಶಾಲಾ ಮಕ್ಕಳನ್ನ ಪ್ರೇರೇಪಿಸಿ, ಅವ್ರಲ್ಲಿ ಸಾಧಿಸೋ ಛಲವನ್ನು ತುಂಬೋ ಪ್ರಯತ್ನ ಮಾಡ್ತಿದ್ದಾರೆ ಪಿಟಿ ಮಾಸ್ಟರ್ ಶರಣ್. ಯೆಸ್.. ಇದು ಗುರುಶಿಷ್ಯರು ಚಿತ್ರದ ಹೊಚ್ಚ ಹೊಸ ಸಾಂಗ್ ಝಲಕ್. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಈ ಹಾಡಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದ್ದು, ಕೈಲಾಶ್ ಖೇರ್ ಕಂಠದಲ್ಲಿ ಹಾಡು ಅಷ್ಟೇ ಸೊಗಸಾಗಿ ಮೂಡಿಬಂದಿದೆ.

ಲಗಾನ್ ಚಿತ್ರದಲ್ಲಿ ಕ್ರಿಕೆಟ್​ಗಾಗಿ ಆಮೀರ್ ಖಾನ್ ಟೀಂನ ಸಿದ್ದಗೊಳಿಸೋ ರೇಂಜ್​ಗೆ ಇಲ್ಲಿ ಶರಣ್ ತನ್ನ ಶಿಷ್ಯ ವೃಂದವನ್ನು ಖೋ ಖೋ ಗೇಮ್​ಗಾಗಿ ಟ್ರೈನ್ ಮಾಡ್ತಿದ್ದಾರೆ. ಇದು 90ರ ದಶಕದ ಬ್ಯಾಕ್​ಡ್ರಾಪ್​ನಲ್ಲಿ ನಡೆಯೋ ಕಥಾನಕ ಆಗಿದ್ದು, ಟಫ್ ಟ್ರೈನಿಂಗ್ ಹೇಗಿರಲಿದೆ..? ಅದ್ರ ಹಿಂದಿನ ಅಸಲಿ ಇಂಟೆನ್ಸ್ ಮ್ಯಾಟರ್ ಏನು ಅನ್ನೋದಕ್ಕೆ ಇದು ಸಾಕ್ಷಿ ಆಗಲಿದೆ.

ಜಡೇಶ್ ಕೆ ಹಂಪಿ ನಿರ್ದೇಶನದ, ಶರಣ್- ತರುಣ್ ಜಂಟಿ ನಿರ್ಮಾಣದಲ್ಲಿ ಚಿತ್ರ ತಯಾರಾಗಿದೆ. ಆಣೆ ಮಾಡಿ ಹೇಳುತೀನಿ ಅನ್ನೋ ಶರಣ್- ನಿಶ್ವಿಕಾ ಜೋಡಿಯ ಡುಯೆಟ್ ಸಾಂಗ್ ಜೊತೆ ಈ ಹಾಡು ಇದೀಗ ಮಸ್ತ್ ಕಿಕ್ ಕೊಡ್ತಿದೆ. ಟೀಸರ್ ಹಾಗೂ ಟ್ರೈಲರ್​ಗಳು ಕೂಡ ನೋಡುಗರ ನಿರೀಕ್ಷೆ ಹೆಚ್ಚಿಸಿದ್ದು, ಇದೇ ಸೆಪ್ಟೆಂಬರ್ 23ಕ್ಕೆ ಥಿಯೇಟರ್​ಗಳಿಗೆ ನುಗ್ಗಲಿದ್ದಾರೆ ಗುರುಶಿಷ್ಯರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

Exit mobile version