Site icon PowerTV

ಸಮುದ್ರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ರಾಜ್ಯಪಾಲ ಗೆಹ್ಲೋಟ್

ಕಾರವಾರ: ಅಂತರಾಷ್ಟ್ರೀಯ ಕಡಲತೀರ ಸ್ವಚ್ಚತಾ ದಿನಾಚರಣೆ ಅಂಗವಾಗಿ ಇಂದು ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭೇಟಿ ನೀಡಿದರು.

ಇಂದು ಕಾರವಾರ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಸ್ವಚ್ಛತೆಯಲ್ಲಿ ಭಾಗಿಯಾಗಿ, ಸಮುದ್ರ ಪೂಜೆ ಸಲ್ಲಿಸುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

ಸ್ವಚ್ಛ ಸಾಗರ, ಸುರಕ್ಷಿತ ಸಾಗರ ಅಭಿಯಾನದಡಿ ಕಾರ್ಯಕ್ರಮ ಆಯೋಜನೆ ಅಡಿ ಅಂತರಾಷ್ಟ್ರೀಯ ಕಡಲ ಸ್ವಚ್ಚತೆ ದಿನಾಚರಣೆಯಲ್ಲಿ ಕರ್ನಾಟಕದ ಕಾಶ್ಮೀರವನ್ನ ರಾಜ್ಯ ಪಾಲರು ಆಯ್ಕೆ ಮಾಡಿಕೊಂಡರು.

ಈ ವೇಳೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಡಿಸಿ ಮುಲ್ಲೈ ಮುಗಿಲನ್ ಇದ್ದರು.

Exit mobile version