Site icon PowerTV

ಬಿಜೆಪಿ ಪಾಳಯದಲ್ಲಿ ಭುಗಿಲೆದ್ದ ಭಿನ್ನಮತ; ಕು. ಬಂಗಾರಪ್ಪ ವಿರುದ್ಧ ಕಾರ್ಯಕರ್ತರ ಗರಂ

ಶಿವಮೊಗ್ಗ: ಸೊರಬ ಬಿಜೆಪಿ ಪಾಳಯದಲ್ಲಿ ಭಿನ್ನಮತ, ಅಸಮಾಧಾನ ಭುಗಿಲೆದ್ದಿದೆ. ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಮತ್ತೆ ಮೂಲ ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲೆಯ ಸೊರಬ ತಾಲೂಕಿನ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಕುಮಾರ್ ಬಂಗಾರಪ್ಪ ವಿರುದ್ಧ ಬೈಕ್ ರ್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮೋ ವೇದಿಕೆ ವತಿಯಿಂದ ಬೈಕ್ ರ್ಯಾಲಿ ನಡೆಸಿ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದು, ಬಿಜೆಪಿ ಹಿರಿಯ ಮುಖಂಡ ಪದ್ಮನಾಭ ಭಟ್ ಹಾಗೂ ಸೊರಬ ನಮೋ ವೇದಿಕೆಯ ಪಾಣಿ ರಾಜಪ್ಪ ವೇದಿಕೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೊರಬದ ಗಿರಿಜಾ ಶಂಕರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ ಬಹಿರಂಗ ಸಭೆಯಲ್ಲೇ ಆಕ್ರೋಶ ಹಾಕಿ ಕುಮಾರ್ ವಿರುದ್ಧ ಗರಂ ಆಗಿದ್ದಾರೆ. ಉಟ್ಟ ಬಟ್ಟೆಯಲ್ಲಿ ರಾತ್ರಿ 12 ಗಂಟೆಗೆ ಬಂಗಾರಪ್ಪ ದಂಪತಿಗಳನ್ನು ಹೊರ ಹಾಕಿದ ವ್ಯಕ್ತಿ ಈ ಕುಮಾರ್ ಬಂಗಾರಪ್ಪ, ಅಪ್ಪ ಅಮ್ಮನನ್ನು ಹೊರ ಹಾಕಿದ ವ್ಯಕ್ತಿ ಸಾಮಾನ್ಯ ಜನರಿಗೆ ಯಾವ ರೀತಿ ನೋಡಿಕೊಳ್ಳುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಲ್ಲದೇ, ನಾವೆಲ್ಲರೂ ತಪ್ಪು ಮಾಡಿದ್ವಿ. ನಮ್ಮ ಹಿರಿಯರು ಟಿಕೆಟ್ ಕೊಟ್ಟು ಬಿಟ್ಟರು. ಬಿಜೆಪಿಯಿಂದ ಗೆಲ್ಲಿಸಿ ಕಳುಹಿಸಿದಕ್ಕೆ ನಮಗೆ…ಎಂದು ಟೀಕಿಸಿದ್ದಾರೆ. ಅಲ್ಲದೇ, ಜಿಲ್ಲೆಯ ದಿಟ್ಟ, ಪ್ರಾಮಾಣಿಕ ರಾಜಕಾರಣಿ ಕಾಗೋಡು ತಿಮ್ಮಪ್ಪ. ಅವರು, ಇವತ್ತು ಕಾಂಗ್ರೆಸ್ ನಲ್ಲಿದ್ದಾರೆ. ಅವರು ನಮ್ಮನ್ನು ಗೌರವದಿಂದ ಕಾಣುತ್ತಾರೆ, ನಾವು ಕೂಡ ಗೌರವ ಕೊಡ್ತೆವೆ. ಅವರಿಗೂ ಸಹ ಕೈ ಕೊಟ್ಟು ಬಂದಿದ್ರು ಎಂದು ಪದ್ಮನಾಭ ಭಟ್ ಕಾರ್ಯಕರ್ತರ ಪರವಾಗಿ ಕುಮಾರ್ ವಿರುದ್ಧ ಗರಂ ಆಗಿದ್ದಾರೆ.

Exit mobile version