Thursday, September 4, 2025
HomeUncategorizedಶ್ರೀಮಂತರನ್ನ ಟಚ್‌ ಮಾಡೋಕೆ BBMPಗಿಲ್ವಾ ಧಮ್

ಶ್ರೀಮಂತರನ್ನ ಟಚ್‌ ಮಾಡೋಕೆ BBMPಗಿಲ್ವಾ ಧಮ್

ಬೆಂಗಳೂರು : ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವಿನ ಬೃಹನ್ ನಾಟಕ ದಿನ ಕಳೆದಂತೆ ಬಟಾಬಯಲಾಗ್ತಿದೆ. ಆದರೆ ಮಧ್ಯಮ ವರ್ಗದವರು, ಬಡವರೇ ಯಾಕೆ ಟಾರ್ಗೆಟ್‌ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ರಾಜಕಾಲುವೆ ಒತ್ತುವರಿ ತೆರವಿನ ನಾಟಕ ಆರಂಭಿಸಿರುವ ಬಿಬಿಎಂಪಿ ಇಪ್ಸಿಲಾನ್ ಕಡೆ ಮುಖ ಮಾಡಿತ್ತು. ಬಿಬಿಎಂಪಿಯ ಜೆಸಿಬಿಗಳು ಇಪ್ಸಿಲಾನ್ ಮಾಡಿಕೊಂಡಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿದ್ವು. ಆರಂಭದಲ್ಲಿ ಭೂಮಾಲೀಕರು ಬಂದು ಗಲಾಟೆ ಮಾಡಿದ್ರೂ ತಲೆಕೆಡಿಸಿಕೊಳ್ಳದ ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವನ್ನು ಆರಂಭಿಸಿದ್ದಾರೆ

ಇನ್ನು, ರಾಜಕಾಲುವೆ ನುಂಗಿದವರಿಗೆ ಕಂಟಕ ಎದುರಾಗಿದ್ದು, ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ನಡೆಯುತ್ತಿದೆ. ಮಾರ್ಕಿಂಗ್‌ ಪಟ್ಟಿಯಲ್ಲಿರುವ ಐಟಿ ಕಂಪನಿಗಳೆಷ್ಟು..? ಬಿಬಿಎಂಪಿ ರೆಡಿ ಮಾಡಿರುವ ಲಿಸ್ಟ್‌ನಲ್ಲಿ ಏನಿದೆ? ಗುಬ್ಬಿ ಮೇಲೆ ಬಿಬಿಎಂಪಿಯಿಂದ ಬ್ರಹ್ಮಾಸ್ತ್ರವೇಕೆ? ಐಟಿ-ಬಿಟಿ, ದೊಡ್ಡವರ ತಂಟೆಗೆ BBMP ಹೋಗ್ತಿಲ್ಲ ಯಾಕೆ ಎಂದು ಪ್ರಶ್ನೆಯಾಗಿಯೇ ಉಳಿದಿದೆ.

RELATED ARTICLES
- Advertisment -
Google search engine

Most Popular

Recent Comments