Site icon PowerTV

ಕೂದಲೆಳೆ ಅಂತರದಲ್ಲಿ ಪಾರಾದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್.!

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಹತ್ಯೆಗೆ ಸಂಚು ಪ್ರಯತ್ನ ವಿಫಲವಾಗಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪುಟೀನ್​ ಬದುಕುಳಿದಿದ್ದಾರೆ.

ವ್ಲಾಡಿಮಿರ್‌ ಪುಟಿನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಬಂಧನ ಮಾಡಲಾಗಿದೆ. 2022 ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬಳಿಕ ಪುಟಿನ್ ಅವರ ಆರೋಗ್ಯ ಕೈಕೊಟ್ಟಿತ್ತು. ಅಲ್ಲದೇ, ಜೀವ ಹಾನಿ ಬಗ್ಗೆ ಬೆದರಿಕೆ ಬಂದಿದ್ದವು.

ತಮ್ಮ ಸರ್ಕಾರಿ ಕಚೇರಿಯಿಂದ ಅಧಿಕೃತ ನಿವಾಸಕ್ಕೆ ಹೋಗುತ್ತಿದ್ದಾಗ ಪುಟಿನ್ ಅವರ ವಾಹನದ ಮುಂಭಾಗಕ್ಕೆ ಏನೋ ಡಿಕ್ಕಿ ಹೊಡೆದಿದೆ. ಪುಟಿನ್ ಅವರ ವಾಹನದಿಂದ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಪುಟಿನ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಯುರೋ ವೀಕ್ಲಿ ವರದಿ ಮಾಡಿದೆ.

ಪುಟಿನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹಲವಾರು ವದಂತಿಗಳು ಹರಡುತ್ತಿರುವಾಗಲೇ ಹತ್ಯೆ ಯತ್ನ ಕೂಡ ಹೊರಬಂದಿವೆ. ಈ ಹಿಂದೆ ಪುಟಿನ್ ತನ್ನ ವಿರುದ್ಧ ಕನಿಷ್ಠ ಐದು ಹತ್ಯೆ ಯತ್ನಗಳು ನಡೆದಿದ್ದವು ಎಂದು ಸಾರ್ವಜನಿಕವಾಗಿ ಪುಟಿನ್​ ಘೋಷಿಸಿದ್ದರು. ಇದು 2017 ರಲ್ಲಿ

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ನಷ್ಟ ಬಗ್ಗೆ ವ್ಲಾಡಿಮಿರ್ ಪುಟಿನ್ ಅವರ ರಾಜೀನಾಮೆಗೆ ರಷ್ಯಾದ ಸ್ವ ಪಕ್ಷದವರೇ ಒತ್ತಾಯಿಸಿದ ಒಂದು ವಾರದ ನಂತರ ಈ ಹತ್ಯೆಯ ಯತ್ನದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪುಟಿನ್​ಗೆ ಯಾವುದೇ ಗಾಯಗಳಾಗಿಲ್ಲ ಎಂದು ವರಿದಿ ತಿಳಿಸಿವೆ.

Exit mobile version