Site icon PowerTV

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಸ್ತೆ ದರೋಡೆಕೋರರು; ಥಳಿಸಿದ ಗ್ರಾಮಸ್ಥರು

ಮಂಡ್ಯ: ಕೈಯಲ್ಲಿ ಗನ್, ಮಚ್ಚು ಲಾಂಗ್ ಹಿಡಿದು ಆಗಿ ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದ ದರೋಡೆಕೋರರನ್ನ ಗ್ರಾಮಸ್ಥರಿಗೆ ಥಳಿಸಿದ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬನ್ನಘಟ್ಟ ಗ್ರಾಮದ ಬಳಿ ಘಟನೆ.

ಎರಡು ಕಾರಿನಲ್ಲಿ ಬಂದಿದ್ದ 10ಕ್ಕೂ ಹೆಚ್ಚು ಕೈಯಲ್ಲಿ ಗನ್, ಮಚ್ಚು ಲಾಂಗ್ ಹಿಡಿದು ರಸ್ತೆಯಲ್ಲಿ ಹಲವರನ್ನ ತಡೆದು ದರೋಡೆ ಮಾಡುತ್ತಿದ್ದರು. ಅದರಂತೆ ಚಿನ್ನದ ವ್ಯಾಪಾರಿಗಳಿದ್ದ ಬಾಲಾಜಿ, ಶಿರಾಜ್​ ಕಾರು ಅಡ್ಡಗಟ್ಟಿ ಈ ಗ್ಯಾಂಗ್​ ತಡೆದು ದರೋಡೆಗೆ ಮುಂದಾಗಿದ್ದಾರೆ. ಈ ವೇಳೆ ಗ್ರಾಮಸ್ಥರ ಕೈಗೆ ತಗ್ಲಾಕೊಂಡಿದ್ದಾರೆ.

ಬೆಳಗಾವಿಯಿಂದ ಮೈಸೂರಿಗೆ ಚಿನ್ನ, ಹಣ ತೆಗೆದುಕೊಂಡು ಹೋಗುತ್ತಿದ್ದರು. ಆಗ ಕಾರು ಬನ್ನಘಟ್ಟ ಬಳಿ ಬರುತ್ತಿದ್ದಂತೆ ರಾಬರಿ ಗ್ಯಾಂಗ್​ ಅಡ್ಡಗಟ್ಟಿದೆ. ಕಾರಿನ ಚಾಲಕ ಕಿರುಚುತ್ತಿದ್ದಂತೆ ಗ್ರಾಮಸ್ತರು ಎಚ್ಚೆತ್ತು ದರೋಡೆಕೊರರನ್ನ ಹಿಡಿದಿದ್ದಾರೆ. ಗ್ರಾಮಸ್ಥರಿಗೆ ಇಬ್ಬರು ಸಿಕ್ಕಿಬ್ಬಿದ್ರೆ, ಉಳಿದವರು ಬಂದಿದ್ದ ಕಾರಿನಲ್ಲೇ ಪರರಾಗಿಯಾಗಿದ್ದಾರೆ.

ಇನ್ನು ಕೈಗೆ ಸಿಕ್ಕ ಇಬ್ಬರನ್ನ ಮರಕ್ಕೆ ಕಟ್ಟಿ ಹಾಕಿ, ಗನ್ ಕಿತ್ತು ಕೊಂಡು ಹಿಗ್ಗಾ ಮುಗ್ಗಾ ಗ್ರಾಮಸ್ಥರು ಥಳಿಸಿದ್ದಾರೆ. ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾದ ದರೋಡೆಕೊರರ ಮೇಲೆ ಪೊಲೀಸ್​ರು ತಲಾಷ್​ ನಡೆಸಿದ್ದಾರೆ.

Exit mobile version