Site icon PowerTV

ಸಚಿವ ಮಾಧುಸ್ವಾಮಿ-ಮಾಜಿ ಶಾಸಕನ ನಡುವೆ ಒಡಕಿರೋದು ನಿಜ: ಸಂಸದ ಬಸವರಾಜು

ತುಮಕೂರು: ಚಿಕ್ಕನಾಯಕನಹಳ್ಳಿ ಬಿಜೆಪಿಯಲ್ಲಿ ಒಡಕಿರೋದು ಎಂದು ತುಮಕೂರು ಸಂಸದ ಜಿ.ಎಸ್​ ಬಸವರಾಜು ಅವರು ಒಪ್ಪಿಕೊಂಡಿದ್ದಾರೆ.

ಕಾನೂನು ಸಚಿವ ಮಾಧುಸ್ವಾಮಿ ಅವರ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿ ಕಿರಣ್ ಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏನ್ರಿ ಚಿಕ್ಕನಾಯಕನಹಳ್ಳಿಯಲ್ಲಿ ಎರಡು ಗುಂಪು ಇದೆ ಹೋಗ್ತಿರಲ್ಲಾ ಎಂದರು. ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಸಿದ್ದರಾಮಯ್ಯ ಬರ್ತಾರೆ. ಸಿದ್ದರಾಮಯ್ಯ ಜನ್ಮದಿನಕ್ಕೆ ಯಡಿಯೂರಪ್ಪ ಬರ್ತಾರೆ. ಅಲ್ಲಿ ಯಾವುದು ಪಾರ್ಟಿ ಪಕ್ಷ ಭೇದವಿಲ್ಲ. ಇಲ್ಲಿರೋ ಬಿಜೆಪಿ ಶಾಸಕರು, ಮಾಜಿ ಶಾಸಕರು ಬಿಜೆಪಿಯವರೆ, ಹೀಗಾಗಿ ಈ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ಇಬ್ಬರು ನಾಯಕರು ಚುನಾವಣೆ ಎದುರಿಸಬೇಕು ಎಂದು ಸಂಸದರು ಅಭಿಪ್ರಾಯಪಟ್ಟರು.

ಸಂಸದ ಬಸವರಾಜು ಮೇಲೆ ಸುರೇಶ್ ಗೌಡ ಅಸಮಾಧಾನದ ವಿಚಾರವಾಗಿ ಪ್ರತಿಕ್ರಿಯಿಸಿ, ಸುರೇಶ್ ಗೌಡ್ರು ಒಂದೊಂದು ಸಲ ಏನಾದ್ರೂ ಹೇಳ್ತಾರೆ. ಸುರೇಶ್ ಗೌಡ ರೀತಿ ಕೆಲಸ ಮಾಡೋ ವ್ಯಕ್ತಿ ಯಾರೂ ಇಲ್ಲ. ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಆಗಿದ್ರೆ ಅದು ತುಮಕೂರು ತಾಲೂಕು ಆಗಿದೆ. ಒಂದೊಂದು ಪಂಪ್ ಸೆಟ್ ಗೂ ಒಂದೊಂದು ಟ್ರಾನ್ಸ್‌ಫಾರ್ಮರ್ಸ್‌ ಕೂರಿಸಿದ್ದಾರೆ. 20 ಸಾವಿರ ಐಪಿ‌ ಸೆಟ್ ಗೆ 20 ಸಾವಿರ ಟ್ರಾನ್ಸ್‌ಫಾರ್ಮರ್ ಹಾಕಿಸಿದ್ದಾರೆ. ಹೆಚ್ಚು ಕಮ್ಮಿ ಆದ್ರೆ ಒಂದೊಂದು ಸಲ ನಮ್ಮನ್ನೇ ಬೈದು ಬಿಡ್ತಾರೆ ಎಂದರು.

ಇನ್ನು ಮಾಧುಸ್ವಾಮಿ ವಿಚಾರವಾಗಿ ಕಿರಣ್ ಕುಮಾರ್ ಗೆ ಬುದ್ದಿ ಹೇಳಿದ ಸಂಸದ ಬಸವರಾಜು, ಕಿರಣ್ ಕುಮಾರ್ ಗೆ ಹೆಚ್ಚಿಗೆ ಹೇಳೋಲ್ಲ. ರಾಜಕೀಯದಲ್ಲಿ ದ್ವೇಷ ಅಸೂಯೆ ಬರ್ತಾವೆ ಹೋಗ್ತಾವೆ. ನಾವು ಇನ್ನೊಬ್ಬರ ಕಾಲು ಎಳೆದರೆ ಪರಮಾತ್ಮ ನಮ್ಮ ಕಾಲು ಎಳಿತಾನೆ. ಎಲ್ಲಾ ದೃಷ್ಟಿಯಿಂದ ಒಗ್ಗಟ್ಟಲ್ಲಿ ಹೋರಾಟ ಮಾಡಿ ಹಂಚಿ ತಿನ್ನುವ ಕೆಲಸ ಮಾಡೋಣ ಎಂದು ತಿಳಿ ಹೇಳಿದರು.

ಮಾಧುಸ್ವಾಮಿ ಅವರು ತಪ್ಪು ಮಾಡಿದ್ರೆ ಅವರ ಪಾಪ ಅವರು ತಲೆ ಮೇಲೆ ಇಟ್ಕೋಳಿ ನಾವು ಮಾತನಾಡೋಲ್ಲ. ನಾನು ಈ ತಾಲೂಕಿಗೆ ಬಂದಿಲ್ಲ ಗೆದ್ದ ಮೇಲೆ ಇಲ್ಲ ಏನು ಬರೋದಕ್ಕೆ ಜಾಗವೇ ಇಲ್ಲ. ಯಾವ ಇನ್ವಿಟೇಷನ್ ನಲ್ಲಿ ಈ ಅಧಿಕಾರಿಗಳು ನನ್ನ ಹೆಸರೇ ಹಾಕಿಸೋಲ್ಲ. ಅದು ಹಾಗಕೂಡದು, ಅದು ಹಾಗಕೂಡದು ಎಂದು ಎರಡೆರಡು ಬಾರಿ ಸಂಸದ ಜಿ.ಎಸ್.ಬಸವರಾಜು ಅವರು ಪುನರುಚ್ಚರಿಸಿದರು.

Exit mobile version