Site icon PowerTV

ಶಾಲೆ ಆರಂಭವಾಗಿ ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಸಿಕ್ಕಿಲ್ಲ ಪಠ್ಯ ಪುಸ್ತಕ.!

ಬೆಂಗಳೂರು: ಶಾಲೆ ಆರಂಭವಾಗಿ ಅರ್ಧ ವರ್ಷ ಮುಗೀತಾ ಬಂದ್ರು ಧಾರವಾಡ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಯಾಗಿಲ್ಲ.

ಧಾರವಾಡ ಹಾಗೂ ಕಲ್ಯಾಣ ಕರ್ನಾಟಕದ 9 ಹಾಗೂ 10 ನೇ ತರಗತಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸೋಶಿಯಲ್ ಸೈನ್ಸ್​ ಹಾಗೂ ಕನ್ನಡ ಪರಿಸ್ಕೃತ ಪಠ್ಯಪುಸ್ತಕ ಇಲ್ಲಿವರೆಗೂ ಶಿಕ್ಷಣ ಇಲಾಖೆ ನೀಡಿಲ್ಲ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸಿಎಂಗೆ ಪತ್ರ ಬರೆದಿದ್ದಾರೆ.

ಪಠ್ಯಪುಸ್ತಕ ಸಮಸ್ಯೆ ಕುರಿತು ಶಿಕ್ಷಣ ಇಲಾಖೆಗೆ ಸಾಕಷ್ಟು ಭಾರಿ ಮನವಿ ಮಾಡಲಾಗಿದರೂ ಪಠ್ಯಪುಸ್ತಕ ಇಲ್ಲಿವರೆಗೂ ಕೊಟ್ಟಿಲ್ಲ. ಪಠ್ಯಪುಸ್ತಕ ಸಿಗದೆ‌‌ ಮಕ್ಕಳಿಗೆ ಸಾಕಷ್ಟು ಸಮಸ್ಯೆ ಆಗ್ತಿದೆ. ಹೀಗಾಗಿ ಶಿಕ್ಷಣ ಮಂತ್ರಿಗಳಿಗೆ ಗಮನಕ್ಕೆ ತಂದು ಮಕ್ಕಳಿಗೆ ಪುಸ್ತಕ ತಲುಪುವಂತೆ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

Exit mobile version