Site icon PowerTV

ಜಗತ್ತಿನ ಅತಿ ಎತ್ತರದ ರಸ್ತೆಯಲ್ಲಿ ರಾರಾಜಿಸಿದ ಅಪ್ಪು-ಕನ್ನಡದ ಧ್ವಜ

ಶಿವಮೊಗ್ಗ: ಜಗತ್ತಿನ ಅತಿ ಎತ್ತರದ ರಸ್ತೆ ಪ್ರದೇಶವಾಗಿರುವ ಭಾರತದ ಹಿಮಾಚಲ ಪ್ರದೇಶದ ಖರದುಂಗ್ಲಾ(17,982 ಅಡಿ) ದಲ್ಲಿ ಅಪ್ಪುವಿನ ಫೋಟೋ ಹಾಗೂ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಶಿವಮೊಗ್ಗದ ಯುವಕರು ಗಮನ ಸೆಳೆದಿದ್ದಾರೆ.

ಸದ್ಯ ಲಡಕ್ ಪ್ರವಾಸದಲ್ಲಿರುವ ಶಿವಮೊಗ್ಗ ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನಯ್ ತಾಂದ್ಲೆ ಹಾಗೂ ಸ್ನೇಹಿತರಾದ ಪ್ರಮೋದ್, ಗೌತಮ್, ಹರೀಶ್, ಕಿರಣ್ ಅವರು ತಮ್ಮ ನೆಚ್ಚಿನ ನಾಯಕನ ಭಾವಚಿತ್ರ ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರ ಪ್ರದೇಶದಲ್ಲಿ ಹಾರಿಸುವ ಸಲುವಾಗಿಯೇ ಪ್ರಯಾಣ ಬೆಳೆಸಿದ್ದರು.

ಅಪ್ಪು ಕೇವಲ ಕರ್ನಾಟಕದ ಜನರ ಪ್ರೀತಿಯನ್ನು ಮಾತ್ರವಲ್ಲದೇ ಜಗತ್ತಿನ ಎಲ್ಲಾ ದೇಶಗಳ ಜನರ ಪ್ರೀತಿ ಗಳಿಸಿದ್ದರು. ಅವರ ನೆನಪು ಇಂದಿಗೂ ದೂರವಾಗುತ್ತಿಲ್ಲ. ಹಾಗಾಗಿಯೇ ನೆಚ್ಚಿನ ನಾಯಕನ ಚಿತ್ರವನ್ನು ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರದ ಪ್ರದೇಶದಲ್ಲಿ ಹಾರಿಸಬೇಕು ಎಂದು ಸ್ನೇಹಿತರೆಲ್ಲರೂ ಸೇರಿ ಈ ಪ್ರವಾಸ ಕೈಗೊಂಡಿದ್ದೇವೆ ಎಂಬುದು ವಿನಯ್ ಹೇಳಿದ್ದಾರೆ.

Exit mobile version