Site icon PowerTV

‘ಬಬ್ಲಿ ಬೌನ್ಸರ್’ ತಮನ್ನಾ ವರಸೆ ನೋಡಿದ್ರೆ ಬೆಚ್ಚಿ ಬೀಳ್ತೀರಾ

ಬಾಹುಬಲಿ ಪೋರಿ ತಮನ್ನಾ ಭಾಟಿಯಾ ಕೂಡ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ತಿದ್ದಾರೆ. ಸಮಂತಾರ ಓ ಬೇಬಿ ಫ್ಲೇವರ್​ನಲ್ಲೊಂದು ಬಬ್ಲಿ ಬೌನ್ಸರ್ ಸಿನಿಮಾ ಮಾಡಿದ್ದಾರೆ. ನಿಜಕ್ಕೂ ಇದೊಂದು ವಿನೂತನ ಪ್ರಯತ್ನವಾಗಿದ್ದು, ಟ್ರೈಲರ್ ಸಖತ್ ಮಜಭೂತಾಗಿದೆ. ಅದ್ರೊಟ್ಟಿಗೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್​ವುಡ್ ಅಪ್ಡೇಟ್ಸ್ ಕೊಡ್ತೀವಿ, ನೀವೇ ಓದಿ.

ಬಾಹುಬಲಿ ಖ್ಯಾತಿಯ ಮಿಲ್ಕಿ ಬ್ಯೂಟಿ ತಮನ್ನಾ ಗ್ಲಾಮರ್ ರೋಲ್​ಗಳ ಜೊತೆ ಎಕ್ಸ್​ಪೆರಿಮೆಂಟ್ಸ್ ಕೂಡ ಮಾಡೋಕೆ ಮುಂದಾಗಿದ್ದಾರೆ. ಸದ್ಯ ಸಮಂತಾ ನಟನೆಯ ಓ ಬೇಬಿ ಚಿತ್ರದಂತಹ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಅದ್ರ ಟ್ರೈಲರ್ ನೋಡುಗರ ಹುಬ್ಬೇರಿಸಿದೆ. ಯೆಸ್.. ಬಬ್ಲಿ ಬೌನ್ಸರ್ ಅನ್ನೋ ಈ ಸಿನಿಮಾ ಮಹಿಳಾ ಬೌನ್ಸರ್ ಕುರಿತ ಸಿನಿಮಾ. ಸಾಮಾನ್ಯವಾಗಿ ಬೌನ್ಸರ್ಸ್​ ಹುಡ್ಗರೇ ಆಗಿರ್ತಾರೆ. ಫಾರ್ ದಿ ಚೇಂಚ್ ಇಲ್ಲಿ ಲೇಡಿ ಬೌನ್ಸರ್ ಆಗಿ ಈ ಬಬ್ಲಿ ಬ್ಯೂಟಿ ತಮನ್ನಾ ಕುತೂಹಲ ಮೂಡಿಸಿದ್ದಾರೆ. ಒಟಿಟಿಗಾಗಿಯೇ ಮಾಡಿರೋ ಈ ಸಿನಿಮಾಗೆ ಮಧುರ್ ಭಂಡಾರ್ಕರ್ ಆ್ಯಕ್ಟಿಂಗ್ ಕಟ್ ಹೇಳಿದ್ದು, ತಮನ್ನಾ ಆ್ಯಕ್ಟಿಂಗ್ ಸಖತ್ ಬೋಲ್ಡ್ ಅನಿಸಲಿದೆ. ಇದೊಂಥರಾ ಮಹಿಳಾ ಸಬಲೀಕರಣಕ್ಕೆ ಪುಷ್ಟಿ ನೀಡೋ ಕಥಾನಕ. ಜೊತೆಗೆ ಹೆಣ್ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸೋ ಸಿನಿಮಾ ಆಗಲಿದೆ ಅಂದ್ರೂ ತಪ್ಪಾಗಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

Exit mobile version