Site icon PowerTV

ಕಾರು ಬಾಡಿಗೆ ಪಡೆದು ಮಾರ್ಗಮಧ್ಯೆ ಚಾಲಕನಿಗೆ ಚಾಕು ಹಾಕಿದ ವ್ಯಕ್ತಿ

ತುಮಕೂರು: ಕಾರು ಬಾಡಿಗೆ ಪಡೆದು ಮಾರ್ಗಮಧ್ಯೆ ಕಾರು ಚಾಲಕನ ಕುತ್ತಿಗೆಗೆ ಚಾಕು ಇರಿದ ಅಪರಿಚಿತ ವ್ಯಕ್ತಿ ಪಾರಾಗಿರುವ ಘಟನೆ ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡದಾಳವಟ್ಟ ಗ್ರಾಮದ ಬಳಿ‌ ನಡೆದಿದೆ.

ಕಾರು ಚಾಲಕ ಸಂಪತ್ ಕುಮಾರ್ ಅವನಿಗೆ ನಾನು ವೈದ್ಯ ಎಂದು ಹೇಳಿ ನಿನ್ನೆ ರಾತ್ರಿ 9.30 ವೇಳೆಗೆ ನೆಲಮಂಗಲದ ದಾಬಸಪೇಟೆ ಯಿಂದ ಬಾಡಿಗೆಗೆ ಕಾರ್ ಬಾಡಿಗೆ ಪಡೆದು ಕರೆದೊಯ್ದು ಚಾಕುವಿನಿಂದ ಅಪರಿಚಿತ ವ್ಯಕ್ತಿ ಹಲ್ಲೆಗೈದಿದ್ದಾನೆ.

ಕಾರ್ ಚಾಲಕ ರಾಷ್ಟ್ರೀಯ ಸಾಮಾಜಿಕ ನ್ಯಾಯದಳದ ರಾಜ್ಯ ಕಾರ್ಯದರ್ಶಿ ಸಂಪತ್ ಕುಮಾರ್ ಎಂದು ತಿಳಿದು ಬಂದಿದ್ದು, ಇರಿತಕ್ಕೆ ಒಳಗಾದ ಸಂಪತ್ ಕುಮಾರ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಈ ಬಗ್ಗೆ ಕೊಡಿಗೆನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version