Site icon PowerTV

‘ಮಗಳು ಜಾನಕಿ’ ಧಾರವಾಹಿಯ ಕಿರುತೆರೆ ನಟ ಮಂಡ್ಯ ರವಿ ನಿಧನ

ಬೆಂಗಳೂರು: ಕನ್ನಡ ಖಾಸಗಿ ಚಾನಲ್​ನ ‘ಮಗಳು ಜಾನಕಿ’ ಧಾರವಾಹಿಯಲ್ಲಿ ನಟಿಸಿದ ಕಿರುತೆರೆ ನಟ ಮಂಡ್ಯ ರವಿ ಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ಅನಾರೋಗ್ಯ ಹಿನ್ನಲೆಯಲ್ಲಿ ಮಂಡ್ಯ ರವಿ ಅವರನ್ನು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಮಂಡ್ಯ ರವಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಇಂದು ಮಂಡ್ಯ ರವಿ ಅವರು ಚಿಕಿತ್ಸೆ ಫಲಿಸದೆ ಸಾವೀಗಿಡಾಗಿದ್ದಾರೆ.

ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ತಮ್ಮ ‌ವಿಭಿನ್ನ ಪಾತ್ರಗಳಲ್ಲಿ ನಟನೆಯ ಮೂಲಕ ಜನರ ಮನಸ್ಸು ಗೆದ್ದವರು ಮಂಡ್ಯ ರವಿ, ಮಗಳು ಜಾನಕಿ ಧಾರಾವಾಹಿಯಲ್ಲಿ ಚಂದು ಭಾರ್ಗಿ ಪಾತ್ರಧಾರಿಯಾಗಿ ಈಗಂತೂ ಕಿರುತೆರೆ ವೀಕ್ಷಕರಿಗೆ ರವಿ ಅವರ ಅಭಿನಯವೂ ಅಚ್ಚುಮೆಚ್ಚು ಆಗಿತ್ತು.

Exit mobile version