Site icon PowerTV

ಆಮ್ ಆದ್ಮಿ ಪಕ್ಷದ ಪ್ರಚಾರ ವಾಹನಕ್ಕೆ ಚಾಲನೆ

ಶಿವಮೊಗ್ಗ: ನಗರದ ಶಿವಪ್ಪನಾಯಕ ವೃತ್ತದಲ್ಲಿ ಇಂದು ಆಮ್ ಆದ್ಮಿ ಪಕ್ಷದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.

ಮಾಜಿ ಮೇಯರ್ ಏಳುಮಲೈ ಕೇಬಲ್ ಬಾಬು ಈ ವಾಹನಕ್ಕೆ ಚಾಲನೆ ನೀಡಿ ಪಕ್ಷದ ಸಿದ್ಧಾಂತ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಬಗ್ಗೆ ಮತ್ತು ಎಎಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ಕಲ್ಪಿಸಿರುವ ಮೂಲ ಸೌಕರ್ಯಗಳು, ಅಭಿವೃದ್ಧಿ ಬಗ್ಗೆ, ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಯಾಕೆ ಮತ ನೀಡಬೇಕು ಎನ್ನುವ ವಿಚಾರದಲ್ಲಿ ತಿಳಿಸಿದರು.

ರಾಜ್ಯದಲ್ಲಿ ದೆಹಲಿ ಮಟ್ಟದಲ್ಲಿ ಆಮ್ ಆದ್ಮಿ ಪಕ್ಷದ ನೀಡಿದ ಕೊಡುಗೆಯನ್ನ ರಾಜ್ಯದಲ್ಲಿ ಆಮ್​ ಆದ್ಮಿ ಗುರಿಗಳನ್ನ ಈ ವಾಹನದ ಮೂಲಕ ಪ್ರಚುರಪಡಿಸಲಾಗುವುದು. ಇನ್ನು ಆಮ್​ ಆದ್ಮಿ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವವರಿಗೆ ಸ್ವಾಗತವಿದೆ. ಪಕ್ಷವನ್ನು ಕಟ್ಟಿ ಬೆಳೆಸಲು ಕೈಜೋಡಿಸುವಂತೆ ಅವರು ವಿನಂತಿಸಿರು.

Exit mobile version