Site icon PowerTV

ಮಂಗ್ಲಿ- ಚಂದನ್ ಗಾನಬಜಾನದಲ್ಲಿ ಗಣಿ ತ್ರಿಬಲ್ ರೈಡಿಂಗ್

ಸಿನಿರಸಿಕರ ಮನದಲ್ಲಿ ಕಲರ್​ಫುಲ್ ಗಾಳಿಪಟ ಹಾರಿಸಿದ ಗೋಲ್ಡನ್ ಸ್ಟಾರ್ ಗಣೇಶ್, ಇದೀಗ ಬರೋಬ್ಬರಿ ಮೂರು ಮಂದಿ ಗ್ಲಾಮರ್ ಡಾಲ್ಸ್ ಜೊತೆ ತ್ರಿಬಲ್ ರೈಡಿಂಗ್ ಹೊರಡಲು ಸಜ್ಜಾಗಿದ್ದಾರೆ. ಅದ್ರ ಝಲಕ್ ಹೇಗಿರಲಿದೆ ಅನ್ನೋದ್ರ ಜೊತೆಗೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್​ವುಡ್ ಅಪ್ಡೇಟ್ಸ್ ನಿಮಗಾಗಿ ಕಾಯ್ತಿವೆ. ನೀವೇ ಓದಿ.

ಯೆಸ್.. ಗಾಳಿಪಟ 2 ಬಿಗ್ಗೆಸ್ಟ್ ಸಕ್ಸಸ್ ಬಳಿಕ ಮಳೆ ಹುಡ್ಗ ಗಣಿ ತ್ರಿಬಲ್ ರೈಡಿಂಗ್ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಮೀನ್ಸ್.. ತ್ರಿಬಲ್ ರೈಡಿಂಗ್ ಚಿತ್ರದ ರಿಲೀಸ್​ಗೆ ಸಜ್ಜಾಗ್ತಿದ್ದಾರೆ. ಜೂಮ್, ಚಮಕ್ ಚಿತ್ರಗಳ ನಂತ್ರ ಮತ್ತೆ ಡಾಕ್ಟರ್ ರೋಲ್​ನಲ್ಲಿ ಕಾಣಸಿಗಲಿರೋ ಗೋಲ್ಡನ್ ಸ್ಟಾರ್, ನನಗೆ ಹೆಣ್ಮಕ್ಳು ಅಂದ್ರೆ ಇಷ್ಟವಿಲ್ಲ ಅಂತಾನೇ ಅದಿತಿ, ರಚನಾ ಹಾಗೂ ಮೇಘಾ ಹೀಗೆ ಮೂರು ಮಂದಿ ಗ್ಲಾಮರ್ ಡಾಲ್​ಗಳ ಜೊತೆ ಡ್ಯಾನ್ಸ್ ರೈಡ್ ಮಾಡ್ತಿದ್ದಾರೆ. ಸಾಧು ಕೋಕಿಲಾ, ರಂಗಾಯಣ ರಘು ಕಾಮಿಡಿ ಟ್ರ್ಯಾಕ್ ಜೊತೆ ಶೋಭರಾಜ್, ಆರ್ಮುಗಂ ರವಿಶಂಕರ್ ಮಾಸ್ ಮಸಲತ್ತು ಚಿತ್ರದಲ್ಲಿ ಜೋರಿರಲಿದೆ. ಸದ್ಯ ಬರ್ತ್ ಡೇ ವಿಶೇಷ ಟೀಸರ್ ಲಾಂಚ್ ಮಾಡಿದ್ದ ಚಿತ್ರತಂಡ, ಇದೀಗ ಯಟ್ಟ ಯಟ್ಟ ಸಾಂಗ್ ಟೀಸರ್​ನ ರಿವೀಲ್ ಮಾಡಿದೆ. ಕನ್ನಡ ಱಪರ್ ಚಂದನ್ ಶೆಟ್ಟಿ ಹಾಗೂ ಬಹುಭಾಷಾ ಸಿಂಗರ್ ಮಂಗ್ಲಿ ಗಾಯನದಲ್ಲಿ ಮೂಡಿಬಂದಿರೋ ಈ ಹಾಡು ಟೀಸರ್​ನಿಂದಲೇ ಮಸ್ತ್ ಮನರಂಜನೆ ನೀಡ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

Exit mobile version