Site icon PowerTV

ನಲಪಾಡ್​ ಅಕಾಡೆಮಿ ಒತ್ತುವರಿ ತೆರವಿಗೆ ಮೀನಾಮೇಷ

ಬೆಂಗಳೂರು: ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನ ರಾಜ್ಯ ಸರ್ಕಾರ ಆದೇಶ ಕೊಟ್ಟಿದ್ದು, ಅದರಂತೆ ಇಂದು  ರಾಜ್ಯ ಯೂತ್​ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್​ ನಲಪಾಡ್ ಅವರ​​ ಅಕಾಡೆಮಿಯನ್ನ ಇಂದು ಜೆಸಿಬಿಯಿಂದ ಉರುಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರಿನ ಚಲ್ಲಘಟ್ಟದಲ್ಲಿ ನಲಪಾಡ್ ಅಕಾಡೆಮಿ ಇದ್ದು, ಇದನ್ನ ಅಕ್ರಮವಾಗಿ ರಾಜಕಾಲುವೆ ಮೇಲೆ ಕಟ್ಟಲಾಗಿತ್ತು. ಹೀಗಾಗಿ ಇಂದು ಒತ್ತುವರಿ ಜಾಗವನ್ನ ಬುಲ್ಡೋಜರ್ ನಿಂದ ತೆರವು ಕಾರ್ಯಚರಣೆ ಮಾಡಲಾಗಿದೆ.

ನಿನ್ನೆ ತಮ್ಮ ಅಕಾಡೆಮಿಯನ್ನ ಉಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ ನಿನ್ನೆ ಕರೆ ಮಾಡಿ ಇದು ರಾಜಕಾಲುವೆ ಒತ್ತುವರಿ ಆಗಿಲ್ಲ. ನಮ್ಮ ಬಳಿ ದಾಖಲೆ ಇದೆ ಅಂತಾ ವಾದ ಮಾಡಿ, ಇಂದು ದಾಖಲೆ ತಗೊಂಡು ಬರ್ತಿನಿ ಅಂತಾ ನಲಪಾಡ್ ಡೈಲಾಗ್ ಒಡೆದಿದ್ದರು.

ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ನಿನ್ನೆಯಿಂದ ಒತ್ತುವರಿ ಜಾಗವನ್ನ ತೆರವು ಮಾಡಲು ವಿಳಂಭ ಮಾಡುತ್ತಿದ್ದಾರೆ. ನಲಪಾಡ್​ ದಾಖಲೆ ಪ್ರಸ್ತುತ ಪಡಿಸದ ಹಿನ್ನಲೆಯಲ್ಲಿ ಇಂದು ಮಾಧ್ಯಮಗಳ ವರದಿ ಮಾಡಿದ ಮೇಲೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ನಲಪಾಡ್​ ಅವರ ಅಕಾಡೆಮಿ ಕೆಡಲು ಅಧಿಕಾರಿಗಳು ಮೀನಾಮೇಷ ಹಾಕುತ್ತಿದ್ದಾರೆ.

Exit mobile version