Site icon PowerTV

ಜಮೀನು ಮಂಜೂರಿಗಾಗಿ ಸೈನಿಕನ ಕಾಲ್ನಡಿಗೆ ಜಾಥ

ಚಿಕ್ಕಬಳ್ಳಾಪುರ :  ಚಿಂತಾಮಣಿ ತಾಲ್ಲೂಕು ರಾಯಪ್ಪನಹಳ್ಳಿಯಲ್ಲಿನ ನಿವಾಸಿಯಾಗಿರುವಂತಹ ಮಾಜಿ ಯೋಧ ಶಿವಾನಂದರೆಡ್ಡಿಗೆ ಮಂಜೂರಾಗಿದ್ದ ಜಮೀನು ಸಿಗದೆ ಪರಿತಪಿಸುವಂತಾಗಿದೆ.

20 ವರ್ಷಗಳಿಂದ ದೇಶ ಸೇವೆ ಸಲ್ಲಿಸಿ, 1999 ರ ಕಾರ್ಗಿಲ್ ಯುದ್ದದಲ್ಲಿ ಕಾಲು ಕಳೆದುಕೊಂಡಿದ್ದರು. ನಿವೃತ್ತಿಯ ಬಳಿಕ ಸರ್ಕಾರದಿಂದ ಮಂಜೂರಾಗಿದ್ದ ಜಮೀನಿಗಾಗಿ ಮಾಜಿ ಸೈನಿಕ ಪರದಾಡುವಂತಾಗಿದೆ. ಯಾವುದೇ ನೌಕರಿ ಸಿಗದೆ, ಮಂಜೂರಾದ ಜಮೀನಿಗಾಗಿ ಪರದಾಡುವಂತಾಗಿದೆ. ಮುಖ್ಯಮಂತ್ರಿ, ರಕ್ಷಣಾ ಸಚಿವರು, ರಾಜ್ಯಪಾಲರಿಗೆ ಮನವಿ ಮಾಡಿದ್ರು ಸಹ ಯಾವುದೇ ಪ್ರಯೋಜನವಾಗಲಿಲ್ಲ. ಎರಡು ಬಾರಿ ಮುಖ್ಯಮಂತ್ರಿ ಗೃಹ ಕಛೇರಿಗೆ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಂಡಿದ್ದರು.

ಅದಲ್ಲದೇ, ಅಧಿಕಾರಿಗಳು ಮಂಜೂರು ಮಾಡಿಕೊಡುವುದಾಗಿ ನಂಬಿಸಿ ಕಾಲ್ನಡಿಗೆ ಜಾಥವನ್ನ ತಡೆದಿದ್ದರು. ಆದರೆ ಕೊನೆಗೂ ಜಮೀನು ಮಂಜೂರು ವಿಚಾರ ಬಗೆಹರಿಯದೇ ರೋಸಿ ಹೋಗಿದ್ದಾರೆ. ಬಿಜೆಪಿಯ ಜನೋತ್ಸವ ದಿನದಂದು ಮತ್ತೆ ಕಾಲ್ನಡಿಗೆ ಜಾಥವನ್ನು ಆರಂಭಿಸಿ ಪ್ರೀಡಂ ಪಾರ್ಕ್ ತಲುಪಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಮಾಜಿ ಸೈನಿಕನಿಗೆ ಮಂಜೂರಾಗಿರುವ ಜಮಿನು ನೀಡಬೇಕು ಎಂಬುದು ನಮ್ಮ ಆಶಯ.

Exit mobile version