Site icon PowerTV

ಹಿಂದಿ ದಿವಸ್‌ ವಿರುದ್ಧ ನಾಳೆ ಕರಾಳ ದಿನ ಆಚರಿಸಲಿರುವ ಕನ್ನಡ ಸಂಘಟನೆಗಳು

ಬೆಂಗಳೂರು: ಸೆಪ್ಟೆಂಬರ್​ 14 (ನಾಳೆ) ರಂದು ಹಿಂದಿ ದಿವಸ ಆಚರಣೆ ಹಿನ್ನಲೆಯಲ್ಲಿ ಹಿಂದಿ ದಿವಸ ವಿರುದ್ಧ ರಾಜ್ಯಾದ್ಯಂತ ವ್ಯಾಪಕವಾಗಿ ಜನಾಕ್ರೋಶ ವ್ಯಕ್ತವಾಗುತ್ತಿದೆ.

ನಾಳೆ ಕನ್ನಡ ಪರ ಸಂಘಟನೆಗಳಿಂದ ಕರಾಳ ದಿನ ಆಚರಣೆ ಮಾಡಲು ಮಲ್ಲೇಶ್ವರಂ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸೇರಿದಂತೆ ಹಲವು ಸಂಘಟನೆಗಳಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಈ ವೇಳೆ ಕರವೇ ನಾರಾಯಣಗೌಡ ಬಣದಿಂದಲೂ ಕೂಡ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದೆ.

ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್​.ಡಿ ಕುಮಾರಸ್ವಾಮಿ ಅವರು ಪತ್ರ ಬರೆದು ಸೆಪ್ಟೆಂಬರ್ 14 ಬುಧವಾರ ನಡೆಯಲಿರುವ ಹಿಂದಿ ದಿವಸವನ್ನು ರಾಜ್ಯದಲ್ಲಿ ಆಚರಣೆ ಮಾಡದಂತೆ ಹೇಳಿದ್ದಾರೆ.

Exit mobile version