Site icon PowerTV

ಬೈಕ್​ ಶೋರೂಮ್‌ನಲ್ಲಿ ಭಾರಿ ಬೆಂಕಿ; 8 ಸಾವು

ಸಿಕಂದರಾಬಾದ್: ತೆಲಂಗಾಣದ ಸಿಕಂದರಾಬಾದ್‌ನಲ್ಲಿ ನಿನ್ನೆ ತಡರಾತ್ರಿ ಎಲೆಕ್ಟ್ರಿಕ್ ಬೈಕ್​ ಶೋರೂಮ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬಹುಮಹಡಿ ಕಟ್ಟಡದ ಮೇಲಿನ ಮಹಡಿಯಲ್ಲಿರುವ ಹೋಟೆಲ್‌ಗೆ ಬೆಂಕಿ ವ್ಯಾಪಿಸಿದ ಪರಿಣಾಮವಾಗಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಸುಮಾರು 40 ಎಲೆಕ್ಟ್ರಿಕ್ ಬೈಕ್‌ಗಳು ನಿಂತಿದ್ದ ಕಟ್ಟಡದ ನೆಲಮಾಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬೈಕ್​ಗೆ ಬ್ಯಾಟರಿಗಳನ್ನು ಚಾರ್ಜ್ ಮಾಡುವಾಗ ಈ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದೆ.

ಈ ಕಟ್ಟು ಒಟ್ಟು ನಾಲ್ಕು ಮಹಡಿ ಹೊಂದಿತ್ತು. ಬೈಕ್​ ಮೇಲಿನ ಮಹಡಿ ಹೋಟೆಲ್‌ನದ್ದ ತಂಗಿದ್ದ ಸುಮಾರು 23 ಜನರು ತಂಗಿದ್ದರು. ದಟ್ಟ ಹೊಗೆ ಹಿನ್ನಲೆಯಲ್ಲಿ ಎರಡನೇ ಮಹಡಿಯಲ್ಲಿ ಮಲಗಿದ್ದ ಕೆಲವರು ಹೊರಬಂದರೆ ಇನ್ನೂ ಕೆಲವರು ಹೊರಬರಲಾಗದೆ ಮೃತಪಟ್ಟಿದ್ದಾರೆ ಎಂದು ಹೈದರಾಬಾದ್ ನ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ತಿಳಿಸಿದ್ದಾರೆ.

Exit mobile version