Site icon PowerTV

ಉಡವನ್ನು ನುಂಗುವ ವ್ಯರ್ಥ ಪ್ರಯತ್ನ ಮಾಡಿದ ಕಾಳಿಂಗ ಸರ್ಪ

ಕಾರವಾರ : ಕಾಳಿಂಗ ಸರ್ಪವೊಂದು ಉಡವನ್ನು ಬೇಟೆಯಾಡಿ ನುಂಗಲೆತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯಾಣ ಕ್ರಾಸ್​​​ ಬಳಿ ನಡೆದಿದೆ.

ಉಡವನ್ನ ನುಂಗುತ್ತಿರುವ ವೀಡಿಯೊ ಬೈಕ್ ಸವಾರನ ಮೊಬೈಲ್​​​ ಕ್ಯಾಮರಾದಲ್ಲಿ ಸೆರೆಯಾಗಿದೆ. ಅನಂತಮೂರ್ತಿ ಮತ್ತಿಘಟ್ಟ ಎಂಬುವರ ಮೊಬೈಲ್‌ನಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸುಮಾರು ಒಂದು ಗಂಟೆಗೂ ಅಧಿಕ ಸಮಯಗಳ ಕಾಲ ಬೃಹತ್​​​ ಗಾತ್ರದ ಕಾಳಿಂಗ ಸರ್ಪ ಉಡವನ್ನು ನುಂಗಲು ಯತ್ನಿಸಿತ್ತು. ಆದರೆ ಶತಪ್ರಯತ್ನ ಮಾಡಿದ್ರೂ ಸಹ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲಾಗಲಿಲ್ಲ. ಉಡದ ಗಾತ್ರ ದೊಡ್ಡದಿದ್ದ ಕಾರಣ ಮತ್ತು ಉಡದ ಬಾಲ ಕಲ್ಲು ಬಂಡೆಗೆ ಸಿಲುಕಿದ್ದರಿಂದ ಉಡವನ್ನು ನುಂಗಲಾಗಲಿಲ್ಲ. ಉಡವನ್ನು ನುಂಗಲಾಗದೆ ಕಾಳಿಂಗ ಸರ್ಪ ಅರ್ಧ ನುಂಗಿದ ಉಡವನ್ನು ವಾಪಾಸ್​​ ಹೊರಹಾಕಿ ಹೊರಡು ಹೋಯಿತು.

Exit mobile version