Site icon PowerTV

ಮಾಜಿ ಸಚಿವ ಸಿ.ಟಿ ರವಿ’ಗೆ ಟಾಂಗ್​ ನೀಡಿದ ಹೆಚ್. ವಿಶ್ವನಾಥ್​​

ಬೆಂಗಳೂರು: ಸಿಟಿ ರವಿ ಮಾತನಾಡಿರುವ ಪದ ಬಳಕೆ ಯಾರೂ ಒಪ್ಪುವುವಂತದಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ದಮ್ಮಿದಿಯಾ, ತಾಕತ್ತು ಇದಿಯಾ ಎಂಬ ಪದ ಬಳಕೆ ಮಾಡುತ್ತಿದ್ದಾರೆ. ಕನ್ನಡ ಭಾಷೆಯನ್ನೇ ಕುಲಕೆಡಿಸುತ್ತಿದ್ದಾರೆ. ರಾಜಕಾರಣಿಗಳು ಮಾತನಾಡುವಾಗ ಬಳಸುವ ಪದಗಳನ್ನು ಹುಷಾರಾಗಿ, ಎಚ್ಚರದಿಂದ ಬಳಸಬೇಕು ಎಂದು ಬಿಜೆಪಿ ನಾಯಕ, ಎಂಎಲ್​ಸಿ ಹೆಚ್. ವಿಶ್ವನಾಥ್​​ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿಯ ಕಚ್ಚಹರುಕ ಪದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಹೆಚ್​ ವಿಶ್ವನಾಥ್​ ಅವರು, ಬೇರೆಯವರನ್ನು ಸಂಸ್ಕೃತಿ ಹೀನ ಎಂದು ಹೇಳ್ತಾ ಹೇಳ್ತಾ ಇದ್ದ ಹಾಗೇ ನಮ್ಮ ಮಾತುಗಳು ಕೂಡ ಸಂಸ್ಕೃತಿ ಹೀನವಾಗಿರುವುದನ್ನು ನಾಡಿನ ಜನರು ಗಮನಿಸುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಎಚ್.ವಿಶ್ವನಾಥ್ ರಕ್ತ ಒಂದೇ ಎಂಬ ಸಿಟಿ ರವಿ ಹೇಳಿಕೆ ವಿಚಾರ, ಹಾಗಾದರೆ ನಾನು ಮತ್ತು ಸಿದ್ದರಾಮಯ್ಯ ಮಾತ್ರ ಮನುಷ್ಯರೇ ಸಿ.ಟಿ ರವಿನೂ‌ ಮನುಷ್ಯನೇ ಎಲ್ಲರೂ‌ ಮನುಷ್ಯರೇ. ಎಲ್ಲರ ರಕ್ತವೂ ಒಂದೇ ಎಂದೇಳಿ ಮಾತನಾಡುವ ಭರದಲ್ಲಿ ಏನೇನೋ ಮಾತಾಡಬಾರದು ಎಂದು ಹೆಚ್. ವಿಶ್ವನಾಥ್ ಅವರು ಸಿಟಿ ರವಿ ಅವರಿಗೆ ಟಾಂಗ್​ ನೀಡಿದರು.

Exit mobile version