Site icon PowerTV

ಹಿಂದಿ ದಿವಸ್ ಆಚರಿಸದಂತೆ ಸಿಎಂ’ಗೆ ಕುಮಾರಸ್ವಾಮಿ ಪತ್ರ

ಬೆಂಗಳೂರು: ಹಿಂದಿ ದಿವಸ್ ಆಚರಿಸದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದಾರೆ.

ಮುಂಬರುವ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಣೆ ವಿಚಾರವಾಗಿ ಪತ್ರ ಬರೆದ ಹೆಚ್​ಡಿಕೆ, ಈ ಕಾರ್ಯಕ್ರಮ ಭಾರತ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಹಿಂದಿ ದಿವಸ್ ಅನ್ನು ಕರ್ನಾಟಕದಲ್ಲಿ ಒತ್ತಾಯ ಪೂರಕವಾಗಿ ಆಚರಣೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ದಿವಸ ರಾಜ್ಯ ಸರ್ಕಾರ ಆಚರಿಸುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಹಿಂದಿ ದಿವಸದ ಆಚರಣೆ ಮಾಡಬಾರದೆಂದು ಕುಮಾರಸ್ವಾಮಿ ಅವರು ಸಿ ಎಂ ಬೊಮ್ಮಾಯಿಗೆ ಆಗ್ರಹ ಮಾಡಿದ್ದಾರೆ.

ದೇಶದಲ್ಲಿ ಸಾವಿರಾರು ಸ್ಥಳೀಯ ಭಾಷೆಗಳನ್ನ ಒಳಗೊಂಡಿದೆ. ಆದರೆ, ಕೇವಲ ಹಿಂದಿ ಭಾಷೆ ಒಂದನ್ನೆ ಮೆರೆಸುವುದು ನಾಡಿಗೆ ಬಗೆಯುವ ದ್ರೋಹ ಎಂದಿದ್ದಾರೆ.

Exit mobile version