Site icon PowerTV

ಏನೋ ಮಗ ನೀರು ಕೊಡೊ ಅಂದಿದ್ದಕ್ಕೆ ಕೊಲೆ..!

ಬೆಂಗಳೂರು : ಏನೋ ಮಗ ನೀರು ಕೊಡೊ ಅಂದಿದ್ದಕ್ಕೆ ಕೊಲೆ ನಡೆದ ಘಟನೆ ಪೀಣ್ಯಾ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

25 ವರ್ಷದ ಸಿದ್ದಿಕ್ ಎಂಬಾತನ ಕೊಲೆ ಮಾಡಿದ್ದು, ನಿನ್ನೆ ರಾತ್ರಿ ಸುಮಾರು 11.30ರ ಸುಮಾರಿಗೆ ನಡೆದಿದೆ. ಆಟೊ ಚಾಲಕನಾಗಿದ್ದ ಮೃತ ಸಿದ್ದಿಕ್ ನಿನ್ನೆ ಜಾಲಹಳ್ಳಿ ಕ್ರಾಸ್ ಕಡೆ ಬಂದಿದ್ದ. ಈ ವೇಳೆ ಮತ್ತೊಬ್ಬ ಆಟೊ ಚಾಲಕ ಅಜಯ್ ನನ್ನ ನೀರು ಕೇಳಿದ್ದ ಸಿದ್ದಿಕ್. ಅಷ್ಟಕ್ಕೆ ಏನೊ ಮಗ ಅಂತ್ಯಾ ಅಂತಾ ಚಾಕುವಿನಿಂದ ಕೊಲೆ ಮಾಡಿದ್ದಾನೆ.

ಇನ್ನು, ಕೂಡಲೇ ಸಿದ್ದಿಕ್‌ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರೊ ಸಿದ್ದಿಕ್. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version