Site icon PowerTV

ವೈದ್ಯಕೀಯ ವಿದ್ಯಾರ್ಥಿ ರಕ್ಷಿಸಲು ಹೋಗಿ ಯುವಕನೂ ನೀರುಪಾಲು

ಚಿಕ್ಕಬಳ್ಳಾಪುರ: ಜಲವೈಭವ ಕಣ್ತುಂಬಿಕೊಳ್ಳಲು ಹೋದ ವೈದ್ಯಕೀಯ ವಿದ್ಯಾರ್ಥಿ ನೀರಿನಲ್ಲಿ ಮುಳುಗುತ್ತಿದ್ದನ್ನ ಕಂಡು ರಕ್ಷಿಸಲು ಹೋದ ಯುವಕನೂ ಸೇರಿ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರದ ಬಳಿ ಸಂಭವಿಸಿದೆ.

ಮೈಸೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ಸಚ್ಚಿದಾನಂದ ಹಾಗೂ ಗೌರಿಬಿದನೂರು ತಾಲ್ಲೂಕು ರಾಮಚಂದ್ರಪುರದ ನರೇಶ್ ಬಾಬು ಮೃತ ದುರ್ದೈವಿಗಳು.

ಶನಿವಾರ ರಜೆ ಇದ್ದ ಕಾರಣ ಶ್ರೀನಿವಾಸ ಸಾಗರ ಕಣ್ತುಂಬಿಕೊಂಡು ಈಜಲು ಹೋದ ಸಚ್ಚಿದಾನಂದ ಮುಳುಗುತ್ತಿದ್ದಾಗ ಅಲ್ಲೇ ಇದ್ದ ನರೇಶ್ ಬಾಬು ಎಂಬುವರು ರಕ್ಷಿಸಲು ಹೋಗಿ ಇಬ್ಬರು ಇಹಲೋಕ ತ್ಯಜಿಸಿದ್ದಾರೆ.

ಶ್ರೀನಿವಾಸ ಸಾಗರದ ಜಲವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬರ್ತಿದ್ದು, ಸೂಕ್ತ ಬಂದೋಬಸ್ತ್ ಕಾರ್ಯ ಇಲ್ಲದಿರುವುದು ಈ ರೀತಿಯ ದುರಂತಗಳಿಗೆ ಕಾರಣ ಅಂತ ಇಲ್ಲಿನ ನಾಗರೀಕರ ಗಂಭೀರ ಆರೋಪವಾಗಿದೆ.

Exit mobile version