Site icon PowerTV

ನಾಳೆ ಬಿಜೆಪಿ ಶಾಸಕನ PSI ಗೋಲ್ಮಾಲ್ ವಿಡಿಯೋ ಬಹಿರಂಗ.?

ಬೆಂಗಳೂರು: ಪಿಎಸ್ ಐ ಹಗರಣದಲ್ಲಿ ಬಿಜೆಪಿ ಶಾಸಕ ಬಸವರಾಜ ಡಡೇಸುಗೂರು ಆಡಿಯೋ ಬಹಿರಂಗ ಹಿನ್ನಲೆ ಪಿಎಸ್ಐ ಹಗರಣಕ್ಕೆ ನಾಳೆ ಕಾಂಗ್ರೆಸ್​ ಸ್ಪೋಟಕ ವಿಡಿಯೋ ಬಹಿರಂಗ ಮಾಡಲು ಸಜ್ಜಾಗಿದೆ.

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರದ್ದು ಎನ್ನಲಾದ ಆಡಿಯೋ ಬಹಿರಂಗವಾಗಿ ವೈರಲ್ ಆಗಿತ್ತು. ಆಗ ಬಿಜೆಪಿ ಶಾಸಲ 15 ಲಕ್ಷ ರೂಪಾಯಿ  ಯಾವಾಗ ನೀಡ್ತಿರಾ ಎಂದಿದ್ದರು. ಅದಕ್ಕೆ ನಾನು ಬೆಂಗಳೂರಿನಲ್ಲಿದ್ದೇನೆ ಊರಿಗೆ ಬಂದ ತಕ್ಷಣ ನಿಮ್ಮ ಹಣ ನೀಡುತ್ತೇನೆ ಎಂದು ಬಿಜೆಪಿ ಶಾಸಕ ಆಡಿಯೋದಲ್ಲಿ ಹೇಳಿದ್ದರು. ಇದಕ್ಕೆ ಆಗ ಪ್ರತಿಕ್ರಿಯಿಸಿದ್ದ ಬಸವರಾಜ ದಡೇಸುಗೂರು ಆಡಿಯೋದಲ್ಲಿರುವ ಧ್ವನಿ ನನ್ನದೆ. ಯಾವುದೋ ಪ್ರಕರಣದ ಕುರಿತು ಮಧ್ಯಸ್ತಿಗೆ ವಹಿಸಲು ನನ್ನೊಂದಿಗೆ ಮಾತನಾಡಿದ್ದರು ಎಂದಿದ್ದರು.

ಇದಕ್ಕೆ ಸಂಬಂಧಿಸಿದಂತೆ ನಾಳೆ ಕಾಂಗ್ರೆಸ್ ವಿಡಿಯೋ ಬಿಡುಗಡೆ ಮಾಡಲಿದೆ. ಶಾಸಕ ಬಸವರಾಜ ದಡೇಸುಗೂರು ಅವರು ಪಿಎಸ್​ಐ ಅಭ್ಯರ್ಥಿಗಳಿಂದ ಹಣ ಸಂಗ್ರಹ ಮಾಡಿರುವ ಸ್ಪೋಟಕ ವಿಡಿಯೋ ವನ್ನ ಅನಾವರಣಗೊಳಿಸಲಿದ್ದಾರೆ.

ಅಧಿವೇಶನ ಸಂದರ್ಭದಲ್ಲಿ ಈ ಶಾಸಕರ ಲಂಚದ ವಿಡಿಯೋ ಮುಂದಿಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಮುಜುಗರ ತರಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ರೂಪಿಸಿದೆ.

Exit mobile version