Site icon PowerTV

ಒತ್ತುವರಿ ಮಾಡಿ ವಿಲ್ಲಾ ನಿರ್ಮಿಸಿದವರಿಗೆ ಕಂದಾಯ ಇಲಾಖೆ ಶಾಕ್‌

ಬೆಂಗಳೂರು : ರಾಜಕಾಲುವೆ ಒತ್ತುವರಿ ಮಾಡಿ ಐಶಾರಾಮಿ ವಿಲ್ಲಾ ನಿರ್ಮಿಸಿದವರಿಗೆ ಕಂದಾಯ ಇಲಾಖೆ ಶಾಕ್‌ ನೀಡಿದೆ.

ನಗರದ ರೈನ್​ಬೋ ಡ್ರೈವ್​ ಲೇಔಟ್‌ನ 13 ವಿಲ್ಲಾಗಳಿಗೆ ತಹಶೀಲ್ದಾರ್‌ ನೋಟಿಸ್ ನೀಡಿದ್ದು, ರಾಜಕಾಲುವೆ ಒತ್ತುವರಿಯಿಂದಲೇ ವಿಲ್ಲಾಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ನೀವೇ ವಿಲ್ಲಾಗಳನ್ನ ತೆರವು ಮಾಡಿ..ಇಲ್ಲವಾದ್ರೆ ನಾವೇ ತೆರವು ಮಾಡ್ತೇವೆ ಎಂದು K.R.ಪುರಂ ತಹಶೀಲ್ದಾರ್ ಅಜೀಕ್‌ ರೇ ನೋಟಿಸ್​ ನೀಡಿದ್ದಾರೆ.

ಇನ್ನು, ಲೇಔಟ್‌ ಜಲಾವೃತವಾಗಲು ಮೂಲ ಕಾರಣ ಕಂಡುಹಿಡಿದ ಕಂದಾಯ ಇಲಾಖೆ ರೈನ್ ಬೋ ಬಡಾವಣೆ ಜುನ್ನಸಂದ್ರ, ಹಾಲನಾಯಕನಹಳ್ಳಿ ವಿಲ್ಲಾ ನಿರ್ಮಾಣ ಮಾಡಿದ್ದು, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಐಶಾರಾಮಿ ವಿಲ್ಲಾಗಳನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ತಹಶೀಲ್ದಾರ್ ನೋಟಿಸ್‌ ನೀಡಿದ್ರಿಂದ ವಿಲ್ಲಾ ಮಾಲೀಕರಿಗೆ ಫುಲ್‌ ಟೆನ್ಷನ್‌ ಆಗಿದ್ದು, ಈ ಹಿಂದೆಯೇ ತೆರವು ಮಾಡಲು ಹೊರಟಾಗ ಕೋರ್ಟ್ ‌ಮೆಟ್ಟಿಲೇರಿದ್ದರು. ಆದರೆ ಈಗ ಮತ್ತೊಮ್ಮೆ ವಿಲ್ಲಾ ತೆರವಿಗೆ ತಹಶೀಲ್ದಾರ್‌ ನೋಟಿಸ್ ನೀಡಿದ್ದಾರೆ.

Exit mobile version