Site icon PowerTV

ಚಿಕ್ಕಪ್ಪನ ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟ ಪ್ರಭಾಸ್

ಹೈದ್ರಾಬಾದ್​: ತೆಲುಗಿನ ಹಿರಿಯ ನಟ ಕೃಷ್ಣಂ ರಾಜು ಅವರ ನಿಧನಕ್ಕೆ ಇಡೀ ಟಾಲಿವುಡ್ ನಟರು ಕಂಬನಿ ಮಿಡಿದಿದ್ದಾರೆ. ಅದರಂತೆ ಚಿಕ್ಕಪ್ಪನ ಸಾವಿಗೆ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್​ ಕಣ್ಣೀರಿಟ್ಟಿದ್ದಾರೆ.

ರೆಬೆಲ್ ಸ್ಟಾರ್ ಕೃಷ್ಣಂ ರಾಜು ಅವರ ಅಂತ್ಯಕ್ರಿಯೆಯ ವೇಳೆಯಲ್ಲಿ ನಟ ಪ್ರಭಾಸ್ ಭಾಗವಹಿಸಿ ಚಿಕ್ಕಪ್ಪನ ನಿಧನಕ್ಕೆ ಭಾವನಾತ್ಮಕವಾಗಿ ದುರ್ಬಲಗೊಂಡು ಕಣ್ಣೀರಿನ ವಿದಾಯ ಹೇಳಿದ್ದಾರೆ.

ಅಂತ್ಯಕ್ರಿಯೆ ವೇಳೆ ನಟ ಪ್ರಭಾಸ್ ಇತರರೊಂದಿಗೆ ಮಾತನಾಡುವ ವೇಳೆ ಕಣ್ಣೀರು ಒರೆಸಿಕೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಅಂತ್ಯಕ್ರಿಯೆಯಲ್ಲಿ ರಾಮ್ ಚರಣ್, ಎಸ್‌ಎಸ್ ರಾಜಮೌಳಿ, ರವಿತೇಜ, ಮಹೇಶ್ ಬಾಬು ಮುಂತಾದ ಹಲವಾರು ಕಲಾವಿದರು ಮತ್ತು ನಿರ್ಮಾಪಕರು ಭಾಗವಹಿಸಿ ಚಿತ್ರರಂಗಕ್ಕೆ ಕೃಷ್ಣಂ ರಾಜು ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

Exit mobile version