Site icon PowerTV

ವಿದ್ಯುತ್ ಬೇಲಿಯ ತಂತಿ ತಗುಲಿ ಮಹಿಳೆ ಸ್ಥಳದಲ್ಲೆ ಸಾವು

ಕಾರವಾರ: ವಿದ್ಯುತ್ ಬೇಲಿಯ ತಂತಿ ತಗುಲಿ ಮಹಿಳೆ ಸ್ಥಳದಲ್ಲೆ ಸಾವೀಗಿಡಾದ ದುರ್ಘಟನೆ ಶಿರಸಿ ತಾಲೂಕಿನ ವಡ್ಡಿನಗದ್ದೆ ಶಾಲೆ ಬಳಿ ನಡೆದಿದೆ.

ಸರಸ್ವತಿ ನಾರಾಯಣ ಕೊಡಿಯಾ (55) ಮೃತ ಮಹಿಳೆ, ವಡ್ಡಿನಗದ್ದೆಯಲ್ಲಿ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ವೇಳೆಯಲ್ಲಿ ಮಹಿಳೆಗೆ ವಿದ್ಯುತ್ ತಂತಿ ಬೇಲಿ ತಗುಲಿ ಸಾವು ಕಂಡಿದ್ದಾಳೆ.

ಆಕಸ್ಮಿಕವಾಗಿ ಸಾವೀಗಿಡಾದ ಮಹಿಳೆ ತಂತಿ ಬೇಲಿ ಮುಟ್ಟಿದ್ದಾಳೆ. ಆಗ ಇದ್ದಕ್ಕಿದ್ದ ಹಾಗೇ ಶಾಕ್​ ಹೊಡೆದು ನೆಲಕ್ಕುರುಳಿ ಸಾವೀಗಿಡಾಗಿದ್ದಾಳೆ. ಈ ಖಾಸಗಿ ಜಾಗವನ್ನ ಅತಿಕ್ರಮಣ ಮಾಡಿ ಕೋಳಿ ಫಾರಂ ವ್ಯಕ್ತಿ ನಿರ್ಮಾಣ ಮಾಡುತ್ತಿದ್ದ, ಸರ್ವೀಸ ಲೈನ್ ನಿಂದ ನೇರವಾಗಿ ಬೇಲಿಗೆ ವಿದ್ಯುತ್ ಕೊಟ್ಟಿರುವುದೇ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದ್ದು, ಸದ್ಯ ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

Exit mobile version