Site icon PowerTV

5 ಸಾವಿರ ಕೆ.ಜಿ.ತೂಗಿದ ಹಾಲಿ ಕ್ಯಾಪ್ಟನ್ ಅಭಿಮನ್ಯು

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ.ಅರಮನೆ ಅಂಗಳಕ್ಕೆ ಬಂದ ಒಟ್ಟು 14‌ ದಸರಾ ಆನೆಗಳಿಗೆ ಮೃಷ್ಟಾನ್ನ ಭೋಜನ ನೀಡಿ ಸತ್ಕಾರ ಮಾಡಲಾಗುತ್ತಿದೆ. ಆನೆಗಳನ್ನು ದಸರಾಗೆ ಸಜ್ಜಾಗಲು ಅಣಿ ಮಾಡಲಾಗುತ್ತಿದೆ.ಶುಕ್ರವಾರ ದಸರಾಗೆಂದು ಮೈಸೂರಿಗೆ ಬಂದ ಎರಡನೇ ತಂಡದ ಆನೆಗಳು ಸೇರಿ ಒಟ್ಟು 14 ಆನೆಗಳನ್ನು ಧನ್ವಂತರಿ ರಸ್ತೆಯಲ್ಲಿ ತೂಕ ಮಾಡಿಸಲಾಯ್ತು. ಮೈಸೂರಿಗೆ ಬಂದ ಬಳಿಕ ಗಜಪಡೆ ತಮ್ಮ ತೂಕ ಹೆಚ್ಚಿಸಿಕೊಂಡಿವೆ.

14 ದಸರಾ ಗಜಗಳ ಪೈಕಿ ಮಾಜಿ ಕ್ಯಾಪ್ಟನ್ ಅರ್ಜುನ 5885 ಕೆ.ಜಿ.ತೂಕ ಹೊಂದಿದ್ದು, ಅರ್ಜುನನೇ ದಸರಾ ಅನೆಗಳಲ್ಲಿ ಅತ್ಯಂತ ಬಲಶಾಲಿಯಾಗಿದ್ದಾನೆ. ಮೈಸೂರಿಗೆ ಬಂದಾಗ ಅರ್ಜುನ 5,775 ಕೆಜಿ ತೂಕವಿದ್ದ, ಇನ್ನೂ ಅರಮನೆ ಪ್ರವೇಶ ಮಾಡಿದಾಗ ದಸರಾ ಕ್ಯಾಪ್ಟನ್ ಅಭಿಮನ್ಯು 4,770 ಕೆ.ಜಿ ತೂಕವಿದ್ದ, ಇದೀಗ 230 ಕೆ.ಜಿ.ತೂಕ ಹೆಚ್ಚಿಸಿಕೊಂಡು 5000 ಸಾವಿರ ಕೆ.ಜಿ. ತೂಕ ಹೊಂದಿದ್ದಾನೆ. ಚೈತ್ರಾ ಆನೆ 3,235 ಕೆ.ಜಿ ತೂಕ ಹೊಂದಿದ್ದು, ಬಂದಾಗ 3050 ಕೆ.ಜಿ ತೂಕವಿತ್ತು. ಭೀಮ ಆನೆ 4,345 ಕೆ.ಜಿ ತೂಕವಿದ್ದು ಬಂದಾಗ 3,920 ಕೆ.ಜಿ ತೂಕವಿತ್ತು.
ಮಹೇಂದ್ರ ಆನೆ 4450 ಕೆ.ಜಿ ತೂಕವಿದ್ದು, ಬಂದಾಗ 4250 ಕೆ.ಜಿ ತೂಕವಿತ್ತು, ವಿಜಯ ಆನೆ 2760 ಕೆ.ಜಿ ತೂಕ ಹೊಂದಿದೆ.
ಗೋಪಿ ಆನೆ 4670 ಕೆ.ಜಿ ತೂಕ ಹೊಂದಿದ್ದು, ಪಾರ್ಥಸಾರಥಿ 3,445 ಕೆ.ಜಿ ತೂಕವಿದೆ. ಗೋಪಾಲಸ್ವಾಮಿ 5,460 ಕೆ.ಜಿ ತೂಕ ಹೊಂದಿದ್ದು, ಬಂದಾಗ 5140 ಕೆ.ಜಿ ತೂಕವಿತ್ತು.

ಒಟ್ಟಿನಲ್ಲಿ, ಅರಮನೆ ಅಂಗಳದಲ್ಲಿರುವ ಆನೆಗಳು ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುವ ಮೂಲಕ ದಸರಾಗೆ ಸಜ್ಜಾಗ್ತಿವೆ.

ಸುರೇಶ್ ಬಿ. ಪವರ್ ಟಿವಿ ಮೈಸೂರು.

Exit mobile version