Site icon PowerTV

ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಮತ್ತೆ ಅರೆಸ್ಟ್​

ಬೆಂಗಳೂರು: ಮನಿ ಲ್ಯಾಂಡರಿಂಗ್ ಆರೋಪದ ಅಡಿಯಲ್ಲಿ ಮಂತ್ರಿ ಡವಲಪರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಸುಶೀಲ್ ಮಂತ್ರಿ ಅವರನ್ನ ನಿನ್ನೆ ರಾತ್ರಿ ಸಿಐಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ ಎಂದು ಪವರ್​ ಟಿವಿಗೆ ಮಾಹಿತಿ ಲಭ್ಯವಾಗಿದೆ.

ತನ್ನ ಗ್ರಾಹಕರಿಗೆ ವಂಚನೆ ಮಾಡಿದ ಗಂಭೀರ ಆರೋಪದ ಜತೆಗೆ ಗ್ರಾಹಕರಿಂದ ಖರೀದಿ ಹಣ ದುರ್ಬಳಕೆ ಆರೋಪವನ್ನ ಸುಶೀಲ್ ಮಂತ್ರಿ ಹೊತ್ತಿದ್ದಾರೆ. ಕಳೆದ ಜೂನ್ 25 ರಂದು ಇಡಿ ಅರೇಸ್ಟ್ ಮಾಡಿ ತನಿಖೆ ಆರಂಭಿಸಿತ್ತು. ಆದಾದ ಬಳಿಕ ಜಾಮೀನಿನ ಮೇಲೆ ಸುಶೀಲ್ ಮಂತ್ರಿ ಹೊರ ಬಂದಿದ್ದರು.

ಆದರಂತೆ ನಿನ್ನೆ ರಾತ್ರಿ ಮತ್ತೆ ಸುಶೀಲ್ ಮಂತ್ರಿ ಅವರನ್ನ ವಂಚನೆ ಆರೋಪದ ಕೇಸ್ ಅಡಿ ಸಿಐಡಿ ಎಸ್​ಪಿ ರವಿ ಡಿ ಚೆನ್ನಣ್ಣನವರ್ ತಂಡದಿಂದ ಬಂಧನ ಮಾಡಲಾಗಿದೆ.

ಮುಂಗಡವಾಗಿ ಬೆಂಗಳೂರಿನ ಫ್ಲಾಟ್ ಖರೀದಿದಾರರಿಂದ ಹಣವನ್ನು ನಿರ್ಮಾಣ ಯೋಜನೆಗಳಿಗೆ ಖರ್ಚು ಮಾಡುವ ಬದಲು ತನ್ನ ವೈಯಕ್ತಿಕ ಬಳಕೆಗೆ ಬಳಸಲಾಗಿದೆ. ಸುಮಾರು 1000 ಕೋಟಿ ಹಣ ಸಂಗ್ರಹಿಸಲಾಗಿದೆ, ಆದರೆ, ಏಳರಿಂದ 10 ವರ್ಷ ಕಳೆದರೂ ಅವರಿಗೆ ಪ್ಲಾಟ್ ನೀಡಿಲ್ಲ ಎಂದು ಆರೋಪಿಸಿದ್ದರು.

Exit mobile version