Site icon PowerTV

ಉಸಿರುಗಟ್ಟಿಸಿ ಒಂಟಿ ವೃದ್ಧೆಯ ಕಗ್ಗೊಲೆ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಒಂಟಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಒಂಟಿಯಾಗಿ ವೃದ್ಧಾಪ್ಯವನ್ನು ಕಳೆಯುತ್ತಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಚಿನ್ನಾಭರಣ ದೋಚಿ ಹೋಗಿರುವ ಮಾಹಿತಿ ಸಿಕ್ಕಿದೆ. ಗುರುವಾರ ರಾತ್ರಿ ಎಲ್ಲರೂ ಊಟ ಮಾಡಿ ಮಲಗುವ ಸಮಯದಲ್ಲಿ ಬಂದಿರುವ ದುಷ್ಕರ್ಮಿಗಳು ಒಂಟಿಯಾಗಿದ್ದ ಪ್ರಶಾಂತ ಕುಮಾರಿ ಕೈಕಾಲು‌ ಕಟ್ಟಾಕಿ ಬಾಯಿಗೆ ಬಟ್ಟೆ ತುಂಬಿ ಉಸಿರುಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಈ ಪ್ರಶಾಂತ ಕುಮಾರಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಮೂಲತ: ಆಂಧ್ರ ಪ್ರದೇಶದ ವಿಜಯವಾಡದವರು. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಾಭವಾನಿ ನಗರದಲ್ಲಿ ವಾಸವಾಗಿದ್ದರು. ಈಕೆಗೆ ಮಕ್ಕಳಿಲ್ಲದ ಕಾರಣ ಪತಿ ಸಾವನ್ನಪ್ಪಿದ ಬಳಿಕ ಒಂಟಿಯಾಗಿ ವಾಸವಾಗಿದ್ದರು. ಈಕೆ ದೇವಹಳ್ಳಿ, ಕನಕಪುರ ರಸ್ತೆ ಸೇರಿ ಬೇರೆ ಬೇರೆ ಕಡೆ ಆಸ್ತಿ ಕೂಡ ಮಾಡಿದ್ದರು.

ಪ್ರಶಾಂತ ಕುಮಾರಿ ಮಾಡಿರುವ ಆಸ್ತಿಯನ್ನೆಲ್ಲಾ ಅನಾಥಾಶ್ರಮಕ್ಕೆ ಬರೆಯಲು ಮುಂದಾಗಿದ್ದರು. ಹೀಗಾಗಿ ಇದನ್ನು ತಪ್ಪಿಸಲು ಗೊತ್ತಿರೋರೆ ಈ ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಹಂತಕರು ಘಟನೆ ನಡೆದ ಸ್ಥಳದಲ್ಲಿ ಯಾವುದೇ ಕುರುಹುಗಳು ಬಿಡದೇ ಚಾಣಾಕ್ಷತನದಿಂದ ಕೊಲೆ ಮಾಡಿ ಪರಾರಿ ಆಗಿರೋದು ಪೊಲೀಸರಿಗೆ ಚಾಲೆಂಜಿಂಗ್ ಆಗಿದೆ.

ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಹಂತಕರ ಬೆನ್ನು ಬಿದ್ದಿದ್ದಾರೆ. ಹಂತಕರು ಅದೆಷ್ಟೇ ಚಾಣಾಕ್ಷರಾಗಿದ್ದರೂ ಖಾಕಿ ಬಲೆಗೆ ಬೀಳಲೇಬೇಕು. ಅವರಿಗೆ ಶಿಕ್ಷೆ ಆಗಲೇಬೇಕು.

ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

Exit mobile version