Site icon PowerTV

ಲೆ.ಗವರ್ನರ್ ವರ್ಸಸ್ ಎಎಪಿ ನಡುವೆ ಮುಸುಕಿನ ಗುದ್ದಾಟ

ನವದೆಹಲಿ : ಲೆಫ್ಟಿನೆಂಟ್ ಗವರ್ನರ್ ವರ್ಸಸ್ ಎಎಪಿ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾದರು.

ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಕಳೆದ ಮೂರು ಬಾರಿ ಲೆಫ್ಟಿನೆಂಟ್ ಗವರ್ನರ್ ಜೊತೆಗಿನ ಭೇಟಿ ತಪ್ಪಿಸಿದ ಕೇಜ್ರಿವಾಲ್ ಇಂದು ವಿಕೆ ಸಕ್ಸೇನಾ ಅವರನ್ನು ಭೇಟಿಯಾದರು.

ಕೊನೆಯ ಬಾರಿಗೆ ಆಗಸ್ಟ್ 12 ರಂದು ಭೇಟಿಯಾಗಿದ್ದ ಕೇಜ್ರಿವಾಲ್, ಆಗಸ್ಟ್ 19 ರಂದು ಮದ್ಯದ ನೀತಿಯಲ್ಲಿನ ಹಗರಣದ ಮೇಲೆ ಸಿಸೋಡಿಯಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ದಿನ ಲೆಫ್ಟಿನೆಂಟ್ ಗವರ್ನರ್ ಭೇಟಿ ತಪ್ಪಿಸಿದರು. ಮುಂದಿನ ಶುಕ್ರವಾರ ಆಗಸ್ಟ್ 26 ರಂದು ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿದ್ದ ಕಾರಣ ಭೇಟಿಯಾಗಿರಲಿಲ್ಲ.

Exit mobile version