Site icon PowerTV

ಬಿಜೆಪಿ ಸಮಾವೇಶದಲ್ಲಿ 6 ಕಿ.ಮೀ ಟ್ರಾಫಿಕ್ ಜಾಮ್​

ದೊಡ್ಡಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಾಣ ಕಿವುಡೊ, ಜಾಣ ಕುರುಡೊ ಅವರ ಕಿವಿಯ ರಂದ್ರ ಸರಿ ಇದೆ. ಅಂದ್ರೆ ನಾವು ಹೇಳೊದು ಕೇಳತ್ತದೆ. ನಾವು ಮಾಡಿರುವ ಯೋಜನೆ ಕಾಣುತ್ತದೆ. ನಾವು ವೇದಿಕೆಯ ಮೂಲಕ ಸಿದ್ದರಾಮಯ್ಯರಿಗೆ ಕೇಳುವಂತೆ ಹೇಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಇಂದು ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಬಿಜೆಪಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಕೆಲವರು ಬೇಲ್ ಮೇಲೆ ಇದ್ದಾರೆ.‌ ಬೇಲ್ ಕ್ಯಾನ್ಸಲ್ ಆದ್ರೆ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಸಿಟಿ ರವಿ ಅವರು ಡಿಕೆಶಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನೇರವಾಗಿ ಹೆಸರು ನನ್ನ ಹತ್ರ ಯಾಕೆ ಹೇಳಿಸ್ತಿರಾ, ನಾನು ಈಗಾಗಲೇ ಸಾಕಷ್ಟು ನಿಷ್ಠುರ ಆಗಿದ್ದೇನೆ. ಕೆಲವರು ಆ ಕಡೆಯವರು(ಕಾಂಗ್ರೆಸ್) ನಮ್ಮ ಜೊತೆ ಬಂದಿದ್ದಾರೆ. ಇನ್ನು ಕೆಲವರು ಬರ್ತಿನಿ ಅಂತಿದ್ದಾರೆ. ಹೀಗಾಗಿ ಕೆಲವೊಮ್ಮೆ ‌ಎಲ್ಲಾವನ್ನು ನಿಷ್ಠುರವಾಗಿ ಹೇಳೊಕೆ ನನಗೆ ಆಗೋದಿಲ್ಲ. ಸಮಾವೇಶಕ್ಕೆ ಬರುವ ರಸ್ತೆಯಲ್ಲಿ ಸುಮಾರು 6 ಕಿ.ಲೋ ಟ್ರಾಫಿಕ್ ಇದೆ ಎಂದರು.

 

Exit mobile version