ನವದೆಹಲಿ: ದೇಶದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸುತ್ತಿರುವ “ಭಾರತ್ ಜೋಡೋ ಯಾತ್ರೆ” ಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧರಿಸಿದ್ದ ಟೀ ಶರ್ಟ್ ಬೆಲೆ ಬರೊಬ್ಬರಿ 41 ಸಾವಿರ ರೂ ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ರಾಷ್ಟ್ರೀಯ ಬಿಜೆಪಿ ಟ್ವೀಟ್ ಮಾಡಿ, ಒಂದು ಚಿತ್ರದಲ್ಲಿ ರಾಹುಲ್ ಗಾಂಧಿ ಧರಿಸಿದ್ದ ಟೀ ಶರ್ಟ್, ಇನ್ನೊಂದು ಚಿತ್ರದಲ್ಲಿ ರಾಹುಲ್ ಟೀ ತೊಟ್ಟಿದ್ದ ಟಿ-ಶರ್ಟ್ ಆನ್ಲೈನಲ್ಲಿರುವ 41,257 ರೂ ಬೆಲೆಯನ್ನ ಟ್ವೀಟ್ ಮಾಡಿದೆ.

ಕಳೆದ ಎರಡು ದಿನದ ಇಂದೆ ಕನ್ಯಾಕುಮಾರಿಯಿಂದ ಕಾಂಗ್ರೆಸ್ ಪಕ್ಷ “ಭಾರತ್ ಜೋಡೋ ಯಾತ್ರೆ” ಆರಂಭ ಮಾಡಿದೆ. ಈ ಯಾತ್ರೆಯ ನೇತೃತ್ವವನ್ನು ನಾನು ವಹಿಸುತ್ತಿಲ್ಲ ಅದರಲ್ಲಿ ಭಾಗವಹಿಸುತ್ತಿದ್ದೇನೆ. ದೇಶದಲ್ಲಿ ದ್ವೇಷ ಹರಡುತ್ತಿರುವ ಬಿಜೆಪಿ-ಆರ್ಎಸ್ಎಸ್ ಮುಖವಾಡವನ್ನು ಜನರ ಎದುರುಗಡೆ ಇಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
Bharat, dekho! pic.twitter.com/UzBy6LL1pH
— BJP (@BJP4India) September 9, 2022


