ಅನಿಲ್ ಕುಂಬ್ಳೆಗೂ ಗುಂಗಿಡಿಸಿದ ಕಮರೊಟ್ಟು ಗುಮ್ಮ..!

ಸೈಲೆಂಟ್​ ಆಗಿ ಸದ್ದು ಮಾಡ್ತಿದೆ ವಿಕ್ರಾಂತ್​ ರೋಣ. ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆಯ ನಡುವೆ ವಿಕ್ರಾಂತ್​ ರೋಣ ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲಿ ಧೂಳೆಬ್ಬಿಸಿದೆ. ಓಟಿಟಿಯಲ್ಲೂ ದಾಖಲೆ ಮಟ್ಟದ ವೀಕ್ಷಣೆ ಕಂಡಿದ್ದು ಅಬ್ಬರಿಸ್ತಿದೆ. ಇದೀಗ, ಸ್ಪಿನ್​ ಮಾಂತ್ರಿಕ ಅನಿಲ್​ ಕುಂಬ್ಳೆ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಈ ಮೂಲಕ ರೋಣನಿಗೆ ಮತ್ತಷ್ಟು ಎನರ್ಜಿ ಬಂದಿದೆ.

  • ಪ್ರೀತಿಯ ಸ್ನೇಹಿತ ಕಿಚ್ಚನಿಗೆ ಸ್ಪಿನ್​ ಜಾದೂಗಾರ ಪ್ರಶಂಸೆ

ಕೆಜಿಎಫ್​ ನಂತ್ರ ಕನ್ನಡ ಸಿನಿಲೋಕದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ ವಿಕ್ರಾಂತ್ ರೋಣ. 3ಡಿ ಎಫೆಕ್ಟ್​ನಲ್ಲಿ ಒಟ್ಟು ಆರು ಭಾಷೆಗಳಲ್ಲಿ ತೆರೆ ಕಂಡು ದಾಖಲೆ ಬರೆದ ಸಿನಿಮಾ. ಕಿಚ್ಚನ ಸಿನಿಕರಿಯರ್​ನಲ್ಲಿ ಹೊಸ ಅದ್ಯಾಯದ ಪುಟ ತೆರೆದ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ವಿಕ್ರಾಂತ್ ರೋಣ. ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆಯ ನಡುವೆಯೂ  200 ಕೋಟಿಗೂ ಅಧಿಕ ಕಲೆಕ್ಷನ್​ ಗಳಿಸಿದ ವಿಭಿನ್ನ ಕಮರೊಟ್ಟು ಕಥೆ.

ಕಿಚ್ಚ ಸುದೀಪ್​ ಬರ್ತ್​ ಡೇ ದಿನವೇ ಓಟಿಟಿಗೆ ಎಂಟ್ರಿ ಕೊಟ್ಟ ವಿಕ್ರಾಂತ್​ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾನೆ.  500 ಮಿಲಿಯನ್​ ನಿಮಿಷಗಳಷ್ಟು ವೀಕ್ಷಣೆ ಕಂಡು ಹೊಸ ಇತಿಹಾಸ ನಿರ್ಮಿಸಿದ್ದಾನೆ. ಈ ನಡುವೆ ಖ್ಯಾತ ಕ್ರಿಕೆಟ್​ ಪಟು, ಸ್ಪಿನ್​​​ ಮೋಡಿಗಾರ, ಆಫ್​​ ಸ್ಪಿನ್​, ಲೆಗ್​ ಸ್ಪಿನ್​ ಜಾದುಗಾರ ಅನಿಲ್​ ಕುಂಬ್ಳೆ ಕಡೆಯಿಂದ ರೋಣನಿಗೆ ಮೆಚ್ಚುಗೆ ಸಿಕ್ಕಿದೆ. ಸಿನಿಮಾ ವೀಕ್ಷಿಸಿ ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕುಂಬ್ಳೆ ಪ್ರೀತಿಯ ಸ್ನೇಹಿತನ ಆ್ಯಕ್ಟಿಂಗ್​ ಕಂಡು ಥ್ರಿಲ್​ ಆಗಿದ್ದಾರೆ.

  • ರಾಜಕುಮಾರಿ ಹಾಡಿಗೆ ತಲೆದೂಗಿದ ಸ್ಟಾರ್​ ಕ್ರಿಕೆಟಿಗ
  • ಅನಿಲ್​ಗೆ ಹಿಡಿಸಿದ ಅನೂಪ್​ ಭಂಡಾರಿ ಮೇಕಿಂಗ್​​

ವಿಕ್ರಾಂತ್ ರೋಣ ಟೀಸರ್​ ಮೂಲಕವೇ ಪ್ರೇಕ್ಷಕರ ಎದೆ ಬಡಿತ ಜೋರು ಮಾಡಿದ್ದ ಸಿನಿಮಾ. ಕಮರೊಟ್ಟು ಗ್ರಾಮದಲ್ಲಿ ನಡೆಯುವ ನಿಗೂಢ ಕಥೆ ಇದು. ಅಲ್ಲಿನ ವಿಸ್ಮಯಕಾರಿ ಕೊಲೆಗಳ ಹಿಂದಿನ ಮೂಲ ಸತ್ಯಗಳೇನು ಎಂಬ ಹುಡುಕಾಟದ ಭಯಾನಕ ಕಥೆಗೆ ಅನಿಲ್​​ ಕುಂಬ್ಳೆ ಕೂಡ ಫಿದಾ ಆಗಿದ್ದಾರೆ. ಈ ಸಿನಿಮಾ ನೋಡಿರುವ ಅನಿಲ್​ ಕುಂಬ್ಳೆ ಮೆಚ್ಚಿಕೊಂಡು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಿಚ್ಚನಿಗೂ, ಕ್ರಿಕೆಟ್​​ಗೂ ಎಲ್ಲಿಲ್ಲದ ನಂಟು. ಅಪಾರ ಅಭಿಮಾನಿ ಬಳಗ ಹೊಂದಿರುವ ಕಿಚ್ಚ ಸುದೀಪ್​ ಅಂತರಾಷ್ಟ್ರೀಯ ಕ್ರಿಕೆಟ್​​ ಆಟಗಾರರ ಜತೆಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಕಿಚ್ಚನನ್ನು ಕಂಡ್ರೆ ಕ್ರಿಕೆಟ್​​ ಆಟಗಾರರು ಕೂಡ ಪ್ರೀತಿಯಿಂದ ಅಪ್ಪುತ್ತಾರೆ. ಯೆಸ್​​.. ಇದಕ್ಕೆ ಸಾಕ್ಷಿಯಾಗಿ ಅನಿಲ್​ ಕುಂಬ್ಳೆ ಕೂಡ ಸಿನಿಮಾ ವೀಕ್ಷಿಸಿ ನೆಚ್ಚಿನ ಗೆಳೆಯನಿಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಜತೆಗೆ ಸಿನಿಮಾದ ರಾಜಕುಮಾರಿ ಹಾಡನ್ನು ಮೆಚ್ಚಿಕೊಂಡಿದ್ದು, ವಿಜಯ್​ ಪ್ರಕಾಶ್​ ದನಿಗೆ ಕ್ಲೀನ್​ ಬೋಲ್ಡ್​ ಅಗಿದ್ದಾರೆ.

ವಿಕ್ರಾಂತ್​​ ರೋಣ ಕೊನೆಯವರೆಗೂ ಸಸ್ಪೆನ್ಸ್​ ಥ್ರಿಲ್ಲರ್​ ಕಾಯ್ದುಕೊಂಡಿದೆ. ಸಿನಿಮಾ ತುಂಬಾ ಹಿಡಿಸಿತು ಎಂದು ಹಾಡಿ ಹೊಗಳಿದ್ದಾರೆ. ಅನೂಪ್​ಭಂಡಾರಿ ಹಾಗೂ ಇಡೀ ಟೀಮ್​ಗೆ ಅಭಿನಂದನೆ ಸಲ್ಲಿಸಿದ್ದಾರೆ ಅನಿಲ್​ ಕುಂಬ್ಳೆ. ಅಂತೂ ರಕ್ಕಮ್ಮನ ಹಾವಳಿ ಇನ್ನೂ ನಿಂತಿಲ್ಲ. ಸಿನಿಪ್ರಿಯರ ಹೊರತಾಗಿ ಕ್ರಿಕೆಟ್​​ ಆಟಗಾರರಿಗೂ ಕ್ರಿಕೆಟ್​ ಗುಂಗು ಹಿಡಿಸಿದ್ದು ಖುಷಿಯ ವಿಚಾರ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES