Site icon PowerTV

ಸ್ಟೋರ್​ಗೆ ನೀರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಔಷಧಿ ಹಾಳು

ಗದಗ: ಔಷಧ ದಾಸ್ತಾನು ಕೊಠಡಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧ ಸಲಕರಣೆಗಳು ಹಾಳಾದ ಘಟನೆ ಗದಗಿನ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಜಿಮ್ಸ್ ಆಸ್ಪತ್ರೆಯ ಅಂಡರ್ ಗ್ರೌಂಡ್ ನಲ್ಲಿ ಮೇನ್ ಡ್ರಗ್ ಸ್ಟೋರ್ ಹೌಸ್ ಮಾಡಲಾಗಿತ್ತು. ಜಿಮ್ಸ್ ಆಸ್ಪತ್ರೆಗೆ ಬೇಕಾದ ಸುಮಾರು ನಾಲ್ಕು ಕೋಟಿ ರೂಪಾಯಿ‌ ಮೊತ್ತದ ಎಲ್ಲಾ ರೀತಿಯ ಔಷಧ ಉಪಕರಣಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಈ ರಕ್ಕಸ‌ ಮಳೆಗೆ ಬಹುತೇಕ ಔಷಧ ಹಾಳಾಗಿದೆ.

ಸುಮಾರು ನಾಲ್ಕೈದು ಅಡಿಯಷ್ಟು ನೀರು ಸಂಗ್ರಹಣೆ ಈ ಜಿಮ್ಸ್​ ಆಸ್ಪತ್ರೆಯಲ್ಲಿ ಸಂಗ್ರಹಣೆಯಾಗಿದ್ದು, ಪಂಪ್ಸೆಟ್ ಮೂಲಕ ನೀರು ಹೊರತೆಗೆದು ಅದರಲ್ಲಿ ಔಷಧ ಹೊರಗಡೆ ಶಿಫ್ಟ್ ಮಾಡಲಾಗ್ತಿದೆ. ರೋಗಿಗಳಿಗೆ ಬಹುತೇಕ ಔಷಧಗಳ ಕೊರತೆ ಆಗಿದೆ. ಮಳೆ ಅವಾಂತರದಿಂದ ರೋಗಿಗಳು, ಸಿಬ್ಬಂದಿಗಳು ನರಳಾಡುವಂತಾಗಿದೆ.

Exit mobile version