Site icon PowerTV

ಜನೋತ್ಸವ ಕಾರ್ಯಕ್ರಮ ಪದೇ ಪದೇ ಮುಂದೂಡಿಕೆ; ಹೆಸರು ಬದಲಾಯಿಸಿದ ಬಿಜೆಪಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಿಂದ ಜನೋತ್ಸವ ಕಾರ್ಯಕ್ರಮವು ಪದೇ ಪದೇ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಈಗ ಜನೋತ್ಸವ ಹೆಸರನ್ನ ಜನಸ್ಪಂದನೆ ಕಾರ್ಯಕ್ರಮ ಎಂದು ಬದಲಾಯಿಸಲಾಗಿದೆ.

ಸೆಪ್ಟೆಂಬರ್ 10 ರಂದು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮ ಹೆಸರಲ್ಲಿ ಹಮ್ಮಿಕೊಂಡಿತ್ತು. ಆದರೆ ಪದೇ ಪದೇ ಈ ಕಾರ್ಯಕ್ರಮ ದಿನ ಮುಂದೂಡಿಕೆ ಹಿನ್ನಲೆಯಲ್ಲಿ ಈಗ ಜನಸ್ಪಂದನ ಹೆಸರಲ್ಲಿ ಸಮಾವೇಶ ನಡೆಸಲು ರಾಜ್ಯ ಬಿಜೆಪಿ ಮುಂದಾಗಿದೆ.

ಮಂಗಳೂರಿನ ಪ್ರವೀಣ್ ನೆಟ್ಟಾರು ಹತ್ಯೆಯಾದ ಹಿನ್ನೆಲೆಯಲ್ಲಿ ಈ ಮೊದಲು ನಿಗದಿಯಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಜುಲೈ 28 ಹಾಗೂ ಆಗಸ್ಟ್ 28 ಎರಡು ಬಾರಿ ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಜನೋತ್ಸವ ಕಾರ್ಯಕ್ರಮ ರದ್ದಾಗಿದೆ. ಇದರೊಂದಿಗೆ ಜನೋತ್ಸವದ ಬದಲಾಗಿ ಜನಸ್ಪಂದನ ಎಂದು ಸಮಾವೇಶ ನಡೆಸಲು ಬಿಜೆಪಿ ತಯಾರಿ ನಡೆಸಿದೆ.

Exit mobile version