Site icon PowerTV

ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಗೆ ಸಂಕಷ್ಟ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್​ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಇಂದಿರಾ ಕ್ಯಾಂಟೀನ್ ಗುಣ ಮಟ್ಟದ ಆಹಾರ ನೀಡದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಕ್ಲೋಸ್ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಗುತ್ತಿಗೆದಾರರು ಗುಣ ಮಟ್ಟದ ಆಹಾರ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ನೀಡುತ್ತಿಲ್ಲ ಎಂಬ ಆರೋಪಕ್ಕೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದೆ.

ಕ್ಯಾಂಟೀನ್​ ಬಾಕಿ ಅನುದಾನ ಬೇಕಿದ್ದರೆ ಇಂದಿರಾಕ್ಯಾಂಟೀನ್​ನಲ್ಲಿ ಸಾರ್ವಜನಿಕರಿಗೆ ಗುಣ ಮಟ್ಟದ ಆಹಾರ ನೀಡಿ, ಇಲ್ಲದಿದ್ದರೆ ಕ್ಯಾಂಟೀನ್​​ ಮುಚ್ಚಬೇಕು ಎಂದು ಬಿಬಿಎಂಪಿಯ ಹಣಕಾಸು ವಿಭಾಗ ಕ್ಯಾಂಟೀನ್​ ಆಹಾರ ಪೂರೈಕೆ ಮಾಡುವ ಶೆಪ್ ಟ್ರಾಕ್ ಮತ್ತು ಶಪಡ್೯ ಇನ್ ಸಂಸ್ಥೆಗಳಿಗೆ ವಾರ್ನ್​ ಮಾಡಿದೆ.

ಸದ್ಯ ಬಾಕಿ ಇರುವ ಅನುಧಾನ ಬಿಡುಗಡೆ ಮಾಡಿ, ನಂತರ ಗುಣಮಟ್ಟದ ಆಹಾರ ನೀಡ್ತೇವೆ ಗುತ್ತಿಗೆದಾರರು ಹೈ ಡ್ರಾಮ ಮಾಡ್ತಿದ್ದಾರೆ.

Exit mobile version