Site icon PowerTV

ಏಷ್ಯಾ ಕಪ್​ ಕ್ರಿಕೆಟ್​, ಪಾಕ್​ ಪರ ಸ್ಟೇಟಸ್​ ಹಾಕಿದ್ದ ಮೂವರ ವಿರುದ್ಧ FIR

ಕೋಲಾರ: ಏಷ್ಯಾಕಪ್ ನಲ್ಲಿ ಭಾರತ ತಂಡದ ವಿರುದ್ದ ಪಾಕಿಸ್ತಾನ ಜಯ ಹಿನ್ನಲೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿ ಸಂದೇಶ ರವಾನಿಸಿದ್ದ ಮೂವರ ವಿರುದ್ದ ಕೇಸ್ ದಾಖಲಾಗಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಸಹೇಲ್ ಪಾಷಾ, ರೋಹಿತ್ ಭಾಷಾ, ಮುನ್ಸೂರ್ ಉಲ್ಲಾ ವಾಟ್ಸಾಪ್​ನಲ್ಲಿ ಸ್ಟೇಟಸ್ ಹಾಕಿದ್ದಲ್ಲದೇ, ಘೋಷಣೆ ಕೂಗಿದ್ದರು. ಈಗ ಇವರ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹೇಲ್ ಪಾಷಾ, ರೋಹಿತ್ ಭಾಷಾ, ಮುನ್ಸೂರ್ ಉಲ್ಲಾ ಪಾಕಿಸ್ತಾನ ಧ್ವಜದೊಂದಿಗೆ ಭಾರತ ತಂಡ ಅಣುಕಿಸುವ ಹಾಗೆ ಕಿಡಿಗೇಡಿಗಳು ವಾಟ್ಸಾಪ್ ಸ್ಟೇಟಸ್ ಹಾಕಿದ್ದರು. ಮೂವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡ ರಾಮಾಂಜಿ ಅವರು ದೂರು ನೀಡಿದ್ದರು. ದೂರು ದಾಖಲಿಸಿ ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. .

Exit mobile version