Site icon PowerTV

ಚೈನ್ ಸ್ನ್ಯಾಚ್ ಹಾಗೂ ನಕಲಿ ನೋಟು ರೆಡಿ ಮಾಡ್ತಿದ್ದ ಟೀಂ ಅರೆಸ್ಟ್.!

ಬೆಂಗಳೂರು: ಚೈನ್ ಸ್ನ್ಯಾಚ್ ಹಾಗೂ ನಕಲಿ ನೋಟು ತಯಾರು ಮಾಡುತ್ತಿದ್ದ ಆರೋಪಿಗಳನ್ನ ಜೆಪಿ ನಗರ ಪೊಲೀಸ್​ ಬಂಧನ ಮಾಡಿದ್ದಾರೆ.

ಕೇರಳ ಮೂಲಕ ಪ್ರದೀಪ ಹಾಗೂ ಸನಲ್ ಬಂಧಿತ ಆರೋಪಿಗಳು, ಕೇರಳದಲ್ಲಿ ಬರೋಬ್ಬರಿ 17 ಚೈನ್ ಕಳುವು ಪ್ರಕರಣದಲ್ಲಿ, ಬೆಂಗಳೂರಿನಲ್ಲಿ 7 ಚೈನ್ ಸ್ನ್ಯಾಚ್ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಈಗ ಇಬ್ಬರು ಆರೋಪಿಗಳನ್ನ ಪೊಲೀಸರು ಎಡೆಮುಡಿಕಟ್ಟಿದ್ದಾರೆ.

ಅಲ್ಲದೇ, ಈ ಆರೋಪಿಗಳು ಬನ್ನೇರುಘಟ್ಟದ ಮನೆಯಲ್ಲಿ 200, 500, 2,000 ರೂ ಮುಖಬೆಲೆಯ ನಕಲಿ ನೋಟನ್ನ ತಯಾರು ಮಾಡ್ತಿದ್ದರು. ಕಲರ್ ಪ್ರಿಂಟರ್ ಇಟ್ಕೊಂಡು ನಕಲಿ ನೋಟುಗಳನ್ನ ತಯಾರು ಮಾಡುತ್ತಿದ್ದರು ಎಂದು ಬಂಧನ ಮಾಡಿದಾಗ ತಿಳಿದುಬಂದಿದೆ.

ಇದೀಗ ಬಂಧಿತರಿಂದ 3.6 ಲಕ್ಷ ರೂ ನಕಲಿ ನೋಟು, 55 ಗ್ರಾಂ ಚಿನ್ನಾಭರಣ, ಹಾಗೂ ಕೃತ್ಯಕ್ಕೆ ಬಳಸಿದ್ದ ಅವೆಂಜರ್ ಬೈಕ್ ನ್ನ ಜೆಪಿ ನಗರ ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Exit mobile version