Site icon PowerTV

ಕೇಂದ್ರ ಗೃಹ ಸಚಿವ ಅಮಿತ್​ ಶಾ ಭದ್ರತೆಯಲ್ಲಿ ಲೋಪ; ಓರ್ವ ಬಂಧನ

ನವದೆಹಲಿ: ಮುಂಬೈ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗೃಹ ಸಚಿವಾಲಯದ ಭದ್ರತಾ ಅಧಿಕಾರಿಯ ಸೋಗಿನಲ್ಲಿ ಬಂದಿದ್ದ ಓರ್ವ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಮುಂಬೈಗೆ ಭೇಟಿ ನೀಡಿದ ವೇಳೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಅವರ ಸಮೀಪಕ್ಕೆ ನಾನು ಭದ್ರತಾ ಸಿಬ್ಬಂದಿ ಎಂದು ಹೋಗಿದ್ದ ವ್ಯಕ್ತಿಯೊಬ್ಬನನ್ನು ಮುಂಬೈನಲ್ಲಿ ಬಂಧಿಸಲಾಗಿದ್ದು, ಧೂಲೆ ನಿವಾಸಿ ಹೇಮಂತ್ ಪವಾರ್ ಬಂಧಿತ ಆರೋಪಿಯಾಗಿದ್ದಾನೆ.

ಅಮಿತ್‌ ಶಾ ಅವರು ಸೋಮವಾರ ಮುಂಬೈಗೆ ಭೇಟಿ ನೀಡಿದ್ದಾಗ ಈ ಭದ್ರತಾ ಲೋಪ ಉಂಟಾಗಿತ್ತು. ಬಂಧಿತ ವ್ಯಕ್ತಿ ಆಂಧ್ರ ಪ್ರದೇಶದ ಸಂಸದರೊಬ್ಬರ ಖಾಸಗಿ ಭದ್ರತಾ ಸಿಬ್ಬಂದಿ ಎಂದು ಗುರುತಿಸಿರುವುದಾಗಿ ವರದಿಗಳು ತಿಳಿಸಿವೆ.

Exit mobile version