Site icon PowerTV

ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ ನೃತ್ಯಗಾರ್ತಿ

ಜಮ್ಮು ಕಾಶ್ಮೀರ: ಇಲ್ಲಿನ ಬಿಷ್ನಾಹ್ ಪ್ರದೇಶದಲ್ಲಿ ನೂರಾರು ಜನರ ಮುಂದೆ ವೇದಿಕೆಯಲ್ಲಿ ನೃತ್ಯಗಾರ್ತಿಯೊಬ್ಬರು ಪ್ರದರ್ಶನ ನೀಡುತ್ತಿದ್ದಾಗ ಸಾವನ್ನಪ್ಪಿದ್ದಾರೆ.

ಮೃತಪಟ್ಟ ನರ್ತಕಿ ಪಾರ್ವತಿ ದೇವಿಯ ವೇಷ ಧರಿಸಿದ್ದಳು,ಯೋಗೇಶ್ ಗುಪ್ತಾ ಎಂಬ ವ್ಯಕ್ತಿ ಭಕ್ತಿಗೀತೆ ಹಾಡುತ್ತಿದ್ದ ವೇಳೆಯಲ್ಲಿ ಹಾಡಿನಲ್ಲಿ ನೃತ್ಯ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಮೊಣಕಾಲುಗಳನ್ನ ಊರಿ ಕುಳಿತುಕೊಳ್ಳುತ್ತಾಳೆ, ನಂತರ ಅವರು ವೇದಿಕೆಯ ಮೇಲೆ ಮಲಗಿ ಆಕೆ ಸಾವನ್ನೊಪ್ಪಿದ್ದಾಳೆ.

ಈ ವಿಡಿಯೋದಲ್ಲಿ ನೃತ್ಯ ನೋಡುಗರರು ಪ್ರದರ್ಶನದ ವಿಡಿಯೋ ಮಾಡುತ್ತಿದ್ದು, ಕೆಲವು ನಿಮಿಷಗಳ ನಂತರ ಅಲ್ಲಿದ್ದ ನೃತ್ಯಗಾರ್ತಿ ಎದ್ದೇಳದಿದ್ದಾಗ ಸಹ ಕಲಾವಿದನೊಬ್ಬ ಶಿವನ ವೇಷವನ್ನು ಧರಿಸಿ ಅವಳನ್ನು ನೋಡಲು ಹೋಗುತ್ತಾನೆ. ಈ ವೇಳೆ ಎದ್ದೇಳದಿದ್ದಾಗ ಸಹ ಕಲಾವಿದರನ್ನ ಕರೆಯುತ್ತಾರೆ. ಆಗ ಹಾಡುಗಾರ ನೆರವಿಗೆ ಬಂದಿದ್ದಾನೆ.

ಈ ವೇಳೆಗೆ ನೃತ್ಯಗಾರ್ತಿಯನ್ನು ಸಹ ಕಲಾವಿದರು ನೃತ್ಯಗಾರ್ತಿಯನ್ನ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಹೃದಯಾಘಾತದಿಂದ ನಿಧನರಾದರು ಎಂದು ವರದಿಗಳು ತಿಳಿಸಿವೆ.

Exit mobile version