Site icon PowerTV

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆ

ಬೆಳಗಾವಿ: ನಿನ್ನೆ ಬೆಂಗಳೂರಿನ ಎಂಎಸ್​ ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದ ಸಚಿವ ಉಮೇಶ್​ ಕತ್ತಿ ಅವರ ಅಂತ್ಯಕ್ರಿಯೆ ತಮ್ಮ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ತಂದೆ ವಿಶ್ವನಾಥ್ ಅವರ ಸಮಾಧಿ ಪಕ್ಕದಲ್ಲಿಯೇ ಉಮೇಶ ಕತ್ತಿ ಅವರ ಅಂತ್ಯಕ್ರಿಯೆ ಮಾಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಉಮೇಶ್ ಕತ್ತಿ ಅವರ ಅಂತಿಮ ದರ್ಶನ ಪಡೆದು, ಕತ್ತಿ ಅವರ ಧರ್ಮಪತ್ನಿಯವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರ ಮಾಡಿದರು.

ಬೆಂಗಳೂರಿನಲ್ಲಿದ್ದ ಉಮೇಶ್​ ಕತ್ತಿ ಅವರ ಪ್ರಾರ್ಥಿವ ಶರೀರವನ್ನ ಇಂದು ಬೆಳಗಾವಿಗೆ ಏರ್​ಲಿಪ್ಟ್​ ಮಾಡಲಾಯಿತು. ನಂತರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಕತ್ತಿ ಅವರ ಹೂಟ್ಟೂರು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಗೆ ಪ್ರಾರ್ಥಿವ ಶರೀರವನ್ನ ವಿಶೇಷ ವಾಹನ ಮೂಲಕ ಸಾಗಿಸಲಾಯಿತು.

ಸಚಿವ ಉಮೇಶ್ ಕತ್ತಿ ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇನ್ನೀತರರು ಪಡೆದರು. ಉಮೇಶ್ ಕತ್ತಿ ಅವರ ಅಂತಿಮ ಯಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

Exit mobile version