Site icon PowerTV

ನೇರ, ನಿಷ್ಠುರವಾಗಿ ಮಾತನಾಡುವ ವ್ಯಕ್ತಿ ಉಮೇಶ ಕತ್ತಿ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ನಮ್ಮ ಜೊತೆಗೆ ಆತ್ಮೀಯವಾದ ಸಂಬಂಧ ಇತ್ತು. ನೇರವಾಗಿ ಮಾತನಾಡುವಂತ ವ್ಯಕ್ತಿತ್ವ ಅವರದ್ದು. ಮನಸ್ಸಿಗೆ ಬಂದಂತೆ, ಸ್ಪಷ್ಟವಾಗಿ ಹೇಳುವಂತ ವ್ಯಕ್ತಿ ಅವರು ಎಂದು ಸಚಿವ ಉಮೇಶ್ ಕತ್ತಿ ನಿಧನಕ್ಕೆ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ಬೆಳಗಾವಿ ಅಭಿವೃದ್ಧಿ ಬಗ್ಗೆ ಕನಸುಗಳನ್ನು ಕಂಡವರು ಅವರು. ಅವರ ಅಗಲಿಕೆ ರಾಜ್ಯಕ್ಕೆ ಬಹಳಷ್ಟು ನಷ್ಟವಾಗಿದೆ. ಅವರು ಸಾವು ನಮಗೆ ನೋವು ತಂದಿದೆ ಎಂದರು.

ನೀರಾವರಿ ವಿಚಾರವಾಗಿ ಬಹಳಷ್ಟು ನಿಷ್ಠುರವಾಗಿ ಮಾತನಾಡುತ್ತಿದ್ದರು. ಪಕ್ಷದ ಬಗ್ಗೆ ಸದಾ ಯೋಚನೆಯನ್ನು ಮಾಡುತ್ತಿದ್ದರು. ಸಕ್ಕರೆ ಕಾರ್ಖಾನೆ ತೆಗೆದು ಸಾಕಷ್ಟು ಜನರಿಗೆ ಉದ್ಯೋಗ ನೀಡಿದ ಮಹಾನ ವ್ಯಕ್ತಿ ಅವರು, ಕತ್ತಿಯವರ ಆತ್ಮಕ್ಕೆ ಭಗವಂತ ಆತ್ಮಕ್ಕೆ ಶಾಂತಿ‌ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

Exit mobile version