Site icon PowerTV

ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ..!

ಹಾಸನ : ಮೂರು ತಿಂಗಳಿಂದ ದಂಪತಿ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯ ಹೆಂಡತಿಯ ಕೊಲೆಯಲ್ಲಿ ಅಂತ್ಯವಾಗಿದೆ.ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಂದು ಪರಾರಿಯಾಗಿದ್ದಾನೆ.ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿಯಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಇಂದ್ರಮ್ಮ ಕೊಲೆಯಾದ ನತದೃಷ್ಟೆಯಾಗಿದ್ದು, ಪಾಪಿಪತಿ ಚಂದ್ರಪ್ಪ ನಾಪತ್ತೆಯಾಗಿದ್ದು,ಸ್ಥಳಕ್ಕೆ ಅರೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಚಂದ್ರಯ್ಯನಿಗಾಗಿ ಬಲೆ ಬೀಸಿದ್ದಾರೆ.

ಗಂಡ ಬೆನ್ನುನೋವೆಂದು ಮನೆಯಲ್ಲಿ ಮಲಗಿದ್ರೂ ಹೆಂಡತಿಯೇ ಕೆಲಸಕ್ಕೆ ಹೋಗಿ ಸಂಸಾರದ ನೊಗ ಹೊತ್ತಿದ್ದಳು. ಆದ್ರೆ, ಚಂದ್ರಪ್ಪನಿಗೆ ಏನಾಗಿತ್ತೋ ಏನೋ ಬೆಳಗ್ಗೆ ಕಂಟಪೂರ್ತಿ ಕುಡಿದು ಬಂದು ಮನಸ್ಸೋ ಇಚ್ಛೆ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನೇ ಮುಗಿಸಿದ್ದಾನೆ. ಬಿಡಿಸಲು ಬಂದ ನೆರೆ ಮನೆಯಾಕೆ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಚಂದ್ರಯ್ಯ ಕುಡಿದು ಬಂದು ನಿತ್ಯವೂ ಗಲಾಟೆ ಮಾಡಿ, ಪತ್ನಿಗೆ ಹೊಡೆಯುತ್ತಿದ್ದನಂತೆ.‌ ಇದೇ ವಿಚಾರಕ್ಕೆ ಕಳೆದ ಒಂದೂವರೆ ತಿಂಗಳಿನಿಂದ ಇಬ್ಬರೂ‌ ಮಾತಾಡ್ತಾ ಇರಲಿಲ್ವಂತೆ.

ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ

Exit mobile version