Site icon PowerTV

ಸಚಿವ ಉಮೇಶ್ ಕತ್ತಿ ನಿಧನ; ಸಹೋದರನ ಆರೋಗ್ಯದಲ್ಲಿ ಏರುಪೇರು

ಬೆಳಗಾವಿ: ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನ ಹಿನ್ನೆಲೆ ಅಂತಿಮ ದರ್ಶನ ವೇಳೆ ಉಮೇಶ್​ ಕತ್ತಿ ಅವರ ಸಹೋದ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು ಆಗಿದೆ.

ಉಮೇಶ್ ಕತ್ತಿ ಅವರ ಪ್ರಾರ್ಥಿವ ಶರೀರ ನೋಡಲು ನಿನ್ನೆಯೇ ಬೆಂಗಳೂರಿಗೆ ರಮೇಶ್ ಕತ್ತಿ ತೆರಳಿದ್ದರು. ಇಂದು ಹುಕ್ಕೇರಿಯ ಬೆಲ್ಲದ ಬಾಗೇವಾಡಿ ಮನೆಯಲ್ಲಿ ಅಣ್ಣನ ಪ್ರಾರ್ಥಿವ ಶರೀರ ನೋಡುತ್ತಿದ್ದಂತೆ ಸಹೋದ ರಮೇಶ್​ ಕತ್ತಿ ಇದ್ದಕ್ಕಿದ್ದಾಗೆ ಅಸ್ವಸ್ಥರಾಗಿದ್ದು, ಈಗ ರಮೇಶ್ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ.

ಅಸ್ವಸ್ಥರಾಗಿರುವ ರಮೇಶ್ ಕತ್ತಿಗೆ ಕೊಠಡಿಯೊಂದರಳೊಗೆ ಇಸಿಜಿ ಪರೀಕ್ಷೆ ನಡೆಸಲಾಗಿತ್ತಿದೆ. ಬೆಳಗಾವಿ ಜಿಲ್ಲೆಯ ‌ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್ ಕತ್ತಿ ಅವರ ಅಂತಿಮ ದರ್ಶನ ಇಡಲಾಗಿತ್ತು, ನಿನ್ನೆಯಿಂದಲೂ ಸಹ ಅಣ್ಣನ ಸಾವಿನಿಂದ ಕಂಗಾಲಾಗಿ ಮಾನಸಿಕವಾಗಿ ರಮೇಶ್​ ಕತ್ತಿ ಕುಗ್ಗಿದ್ದಾರೆ ಎಂದು ಕುಟುಂಬದ ಆಪ್ತರು ಹೇಳಿದರು.

Exit mobile version